ಜಿಲ್ಲೆ

ಹುಬ್ಬಳ್ಳಿ-ಹೊಸಪೇಟೆ ಮಧ್ಯೆ ರೈಲ್ವೆ ಕಾಮಗಾರಿ ಪರಿಶೀಲಿಸಿದ ಜಿಎಂ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಮುಕುಲ ಸರನ ಮಾಥುರ ಅವರು ಶನಿವಾರದಂದು ಹುಬ್ಬಳ್ಳಿ&ಹೊಸಪೇಟೆ ಮಧ್ಯೆ ವಿಂಡೋ ಟ್ರೇಲಿಂಗ್​ ತಪಾಸಣೆ ಮೂಲಕ ಸುರಕ್ಷತೆ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಹೊಸಪೇಟೆ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಒದಗಿಸುತ್ತಿರುವ ವಿವಿಧ ಸೌಲಭ್ಯಗಳನ್ನು ಪರಿಶೀಲನೆ ಮಾಡಿದರು. ಹೊಸಪೇಟೆಯಲ್ಲಿನ ಸ್ಟೇಶನ್​ ಯಾರ್ಡ್​ನಲ್ಲಿ ಸಿಬ್ಬಂದಿ ಅನುಸರಿಸುತ್ತಿರುವ ಸುರಕ್ಷತಾ ಕ್ರಮಗಳನ್ನು ವೀಸಿದರು. ಸುರತ ರೈಲು ಸಂಚಾರಕ್ಕಾಗಿ ಅಗತ್ಯ ಇರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹೊಸಪೇಟೆಯಲ್ಲಿನ ಕ್ಯಾರೇಜ್​ ಮತ್ತು ವ್ಯಾಗನ್​ ಟಕಕ್ಕೆ ಭೇಟಿ ನೀಡಿದರು. ರೈಲು ನಿಲ್ದಾಣದಲ್ಲಿನ ರನ್ನಿಂಗ್​ ರೂಮ್​, ನಿಲ್ದಾಣದ ಸ್ವಚ್ಛತೆ ಪರಿಶೀಲಿಸಿದರು. ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕಿ ಬೆಲಾ ಮೀನಾ ಹಾಗೂ ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.