ಹೊಸಪೇಟೆ ತಾಲೂಕಿನ ಕಡ್ಡಿರಾಂಪುರದ ಬಳಿ ಶನಿವಾರ ಮುರುಗನ್ ಅಡಿ ಕೀರ್ತಿಕೆಯ ನಿಮಿತ್ತ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿರುವುದು. 
ಜಿಲ್ಲೆ

ವೈಭವದ ಮುರುಗನ್ ಅಡಿ ಕೀರ್ತಿಕೆಯ

Kopala - Desk - Eraveni

ಹೊಸಪೇಟೆ: ತಾಲೂಕಿನ ಕಡ್ಡಿರಾಂಪುರದಲ್ಲಿ ಶನಿವಾರ ಮುರುಗನ್ ದೇಗುಲದಲ್ಲಿ ಅಡಿ ಕೀರ್ತಿಕೆಯ 51ನೇ ವಾರ್ಷಿಕೋತ್ಸವ ಕಾರ್ಯಕ್ರಮ ವೈಭವದಿಂದ ಜರುಗಿತು.

ಕಡ್ಡಿರಾಂಪುರ ಗ್ರಾಮದ ಮುರುಗನ್ ದೇಗುಲದಲ್ಲಿ ಬೆಳಗ್ಗೆ ದೇವರಿಗೆ ವಿಶೇಷ ಅಂಲಕಾರ ಮಾಡಲಾಯಿತು. ಜತೆಗೆ ಕಾವಡಿಗಳು, ಹೂವಿನ ಕಾವಡಿಗಳು, ಹಾಲಿನ ಕಾವಡಿಗಳು, ಗುಂಡು ಅಲಗು ಮತ್ತು ಸುಬ್ರಹ್ಮಣ್ಯ ಸ್ವಾಮಿ ಶೂಲಾಯುಧ ಹೊತ್ತು ಸ್ವಾಮಿ ದೇಗುಲದಲ್ಲಿ ಭಕ್ತರು ದೇವರಿಗೆ ಅಲಗುಗಳನ್ನು ಪ್ರತಿಷ್ಠಾಪಿಸಿದರು.

ಹಂಪಿಗೆ ಹೋಗುವ ಮಾರ್ಗದಲ್ಲಿ ಬರುವ ತುರ್ತು ಕಾಲುವೆಯಿಂದ ಕಡ್ಡಿರಾಂಪುರದ ಸುಬ್ರಹ್ಮಣ್ಯ ದೇಗುಲದವರೆಗೆ ಭಕ್ತರು ಬೆನ್ನಿಗೆ ಕಬ್ಬಿಣದ ಸರಳು ಚುಚ್ಚಿ ತಮ್ಮ ಹರಕೆ ತೀರಿಸಿದರು. ಕೇಲವರು ಬೆನ್ನು, ಹೊಟ್ಟೆಗೆ ಮತ್ತು ಬಾಯಿಗೆ ಕಬ್ಬಿಣದ ಸರಳುಗಳನ್ನು ಚುಚ್ಚಿಸಿಕೊಂಡು ಅಡಿಕೀರ್ತಿ ಎಂಬ ಹೆಸರಲ್ಲಿ ಹರಕೆ ತೀರಿಸಿದರು. ಇನ್ನೂ ಕೆಲವರು ತಮ್ಮ ಬೆನ್ನಿಗೆ ಕಬ್ಬಿಣದ ಸರಳು ಹಾಕಿಕೊಂಡು ಆಟೋ, ಕಲ್ಲು ಗುಂಡನ್ನು ದೇಗುಲದವರೆಗೆ ಎಳೆದು ಹರಕೆ ತೀರಿಸಿದರು.