ಜಿಲ್ಲೆ

ವೈಭವದ ಶ್ರೀ ದುರ್ಗಾಪೂಜಾ ಮಹೋತ್ಸವ

ಜಿ.ಹೆಚ್. ಧನ್ಯಕುಮಾರ್

ಕಳಸ: ಕಳಸ ಸಾರ್ವಜನಿಕ ಶ್ರೀ ದುರ್ಗಾಪೂಜಾ ಸಮಿತಿಯಿಂದ 36ನೇ ವರ್ಷದ ಸಾರ್ವಜನಿಕ ಶ್ರೀ ದುರ್ಗಾಪೂಜಾ ಮಹೋತ್ಸವ ಅ.3ರಿಂದ 12ರ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಳಸ ದುರ್ಗಾ ಮಂಟಪದಲ್ಲಿ ಅದ್ದೂರಿಯಾಗಿ ನೆರವೇರಲಿದೆ.
ಅ.3 ರಂದು 11.10ಕ್ಕೆ ಶ್ರೀ ದುರ್ಗಾದೇವಿಯ ವಿಗ್ರಹ ಪ್ರತಿಷ್ಠಾಪನೆ. ಸಂಜೆ ಹೊರನಾಡು ದೇವಸ್ಥಾನದ ಟ್ರಸ್ಟಿ ಶ್ರೀಮತಿ ಪ್ರತಿಭಾ ಮತ್ತು ರಾಜಗೋಪಾಲ ಜೋಷಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಟ್ವಿಂಕ್‌ಲಿಂಗ್ ಸ್ಟಾರ್ ದಿ ಸ್ಕೂಲ್ ಆಫ್ ಡ್ಯಾನ್ಸ್ ಕಳಸ ಹಾಗೂ ಕಲ್ಲುಬಾವಿ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ.
4ರಂದು ಸಂಜೆ ಕಳಸದ ಶಿವಂ ಕಲಾವಿದರಿಂದ ರಸಮಂಜರಿ. 5 ರಂದು ಸಂಜೆ ವದನ ಸತ್ವ ರಜೋ ತಮೋ ಗುಣಗಳ ಸಂಘರ್ಷದ ಚಿತ್ರ ಪ್ರದರ್ಶನ ಪ್ರಧಾನ ಭೂಮಿಕೆಯಲ್ಲಿ ಶ್ರೀರಾಜಗೋಪಾಲ ಜೋಷಿ ಹಾಗೂ ಚಿತ್ರ ತಂಡದವರಿಗೆ ಗೌರವ ಸಮರ್ಪಣೆ. ರಾತ್ರಿ ಶ್ರೀ ಗುತ್ಯಮ್ಮ ಪ್ರಸಾದಿತ ಯಕ್ಷಗಾನ ಮಂಡಳಿಯಿಂದ ಶ್ರೀ ಕ್ಷೇತ್ರ ಗುತ್ತಿಯಡೇಹಳ್ಳಿ ಸೀತೂರು ಇವರಿಂದ ನಾಗಮಂಡಲ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.
ಉಡುಪಿಯ ಸನ್ನಿಧಿ ಕಲಾವಿದರಿಂದ 6ರಂದು ಸಂಜೆ ಅಪ್ಪೆ ಮಂತ್ರ ದೇವತೆ ತುಳು ನಾಟಕ, 7ರಂದು ಸ್ವರನಾದ ಮ್ಯೂಸಿಕಲ್‌ನಿಂದ ಸ್ವರನಾದ ಮ್ಯೂಸಿಕ್-ಮಸ್ತಿ ಕಾರ್ಯಕ್ರಮ. 8 ರಂದು ಚಾ ಪರ್ಕ ಕುಡ್ಲ ಇವರಿಂದ ಏರ‌್ಲಾ ಗ್ಯಾರಂಟಿ ಅತ್ತ್ ತುಳು ನಾಟಕ. 9 ರಂದು ಕಾರ್ಕಳದ ಶ್ರೀ ವೇಣಿ ಸುಬ್ರಹ್ಮಣ್ಯ ಭಟ್ ಬಳಗದಿಂದ ಯಕ್ಷ-ದಾಸ-ಗಾನ ವೈಭವ. 10ರಂದು ಬೆಳಗ್ಗೆ ದುರ್ಗಾ ಹೋಮ, ಹೂವಿನ ಪೂಜೆ, ಸೌಂದರ್ಯ ಲಹರಿ. ಸಂಜೆ ರಂಗಪೂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ.ನಂದನ್ ಸಾರಥ್ಯದಲ್ಲಿ ಸಂಗೀತ ಗಾನ ಲಹರಿ. 11ರಂದು ಸಂಜೆ ಸೊರಬದ ಡ್ರೀಮ್ ಡ್ಯಾನ್ಸ್ ಅಕಾಡೆಮಿ ಇವರಿಂದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ.
ಅ 12ರಂದು ಬೆಳಗ್ಗೆ ಸಂಗೀತ ಸಂಜೆ, ಮಧ್ಯಾಹ್ನ ಶ್ರೀ ದೇವಿಯ ವೈಭವದ ಶೋಭ ಯಾತ್ರೆ ನಂತರ ಕೋಟಿ ತೀರ್ಥದಲ್ಲಿ ತೆಪೋತ್ಸವ ನಂತರ ವಿಸರ್ಜನೆ, ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಹುಲಿ ಕುಣಿತ, ಸೌಂಡ್ಸ್ ಎಂಡ್ ಲೈಟ್ಸ್, ಕೀಲು ಕುದುರೆ, ಗೊಂಬೆ ಕುಣಿತ ಇರಲಿದೆ ಎಂದು ಸಮಿತಿ ಅಧ್ಯಕ್ಷ ಎನ್.ಪಿ.ಭರತರಾಜ್ ತಿಳಿಸಿದ್ದಾರೆ.