ಜಿಲ್ಲೆ

ಜ. 5, 6ರಂದು ಮಣಿಪಾಲದಲ್ಲಿ ಜಾಗತಿಕ ಆರೋಗ್ಯ ಶೃಂಗಸಭೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ಅಮೆರಿಕನ್​ ಅಸೋಸಿಯೇಶನ್​ ಆಫ್​ ಫಿಸಿಶಿಯನ್ಸ್​ ಆಫ್​ ಇಂಡಿಯನ್​ ಒರಿಜಿನ್​ ಸಂಟನೆ ಆಶ್ರಯದಲ್ಲಿ ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ ಸಹಯೋಗದೊಂದಿಗೆ ಜ. 5 ಮತ್ತು 6ರಂದು ಮಣಿಪಾಲ ಫಾರ್ಚೂನ್​ ಇನ್​ ವ್ಯಾಲಿವ್ಯೂನಲ್ಲಿ ಜಾಗತಿಕ ಆರೋಗ್ಯ ಶೃಂಗಸಭೆ ನಡೆಯಲಿದೆ ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್​. ಎಸ್​. ಬಲ್ಲಾಳ್​ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ. 5ರಂದು ಬೆಳಗ್ಗೆ 11.30ಕ್ಕೆ ಉಸ್ತುವಾರಿ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​ ಉದ್ಘಾಟಿಸಲಿದ್ದಾರೆ. ಅನಿವಾಸಿ ಭಾರತೀಯ ಸೆಲ್​ ಅಧ್ಯೆ ಆರತಿ ಕೃಷ್ಣ ಮೊದಲಾದವರು ಭಾಗವಹಿಸುವರು ಎಂದರು.

ಅಮೆರಿಕಾದ ಸುಮಾರು 100 ವೈದ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 'ಆರೋಗ್ಯ ರಕ್ಷಣೆ ಮತ್ತು ಕೃತಕ ಬುದ್ಧಿಮತ್ತೆಯ ಭವಿಷ್ಯ' ಕುರಿತು ಚರ್ಚಿಸಲಾಗುವುದು. ಜಾಗತಿಕ ಆರೋಗ್ಯ ರಕ್ಷಣೆಯಲ್ಲಿ ಹೊಸ ಗುರಿಗಳ ಬಗ್ಗೆ ನಿರ್ಧರಿಸಲಾಗುವುದು. ಆರೋಗ್ಯ ಸೇವೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕೆನ್ನುವುದು ಶೃಂಗಸಭೆಯ ಆಶಯ ಎಂದರು.

ಇಂಡಿಯನ್​ ಅಮೆರಿಕನ್​ ಫೋರಮ್​ ಫಾರ್​ ಪೊಲಿಟಿಕಲ್​ ಎಜುಕೇಶನ್​ ಅಧ್ಯಕ್ಷ ಡಾ. ಸಂಪತ್​ ಶಿವಾಂಗಿ ಮಾತನಾಡಿ, ಅಮೆರಿಕಾದಲ್ಲಿ ಸುಮಾರು 1 ಲಕ್ಷ ಮಂದಿ ಭಾರತೀಯ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆರೋಗ್ಯ ರಕ್ಷಣೆಯಲ್ಲಿ ಭಾರತ ಮತ್ತು ಅಮೆರಿಕಾದ ಸಹಭಾಗಿತ್ವ ಮತ್ತು ಪರಸ್ಪರ ಜ್ಞಾನದ ವಿನಿಮಯ ಇತ್ಯಾದಿಗಳ ವಿಷಯಗಳ ಬಗ್ಗೆ ಶೃಂಗಸಭೆ ಬೆಳಕು ಚೆಲ್ಲಲಿದೆ ಎಂದರು.

ಅಪ್ಪಿ ಮಹಿಳಾ ಘಟಕ ಅಧ್ಯಕ್ಷೆ ಉದಯಾ ಶಿವಾಂಗಿ, ಮಾಹೆ ಮಣಿಪಾಲ ಉಪಕುಲಪತಿ ಡಾ. ಎಂ. ಡಿ. ವೆಂಕಟೇಶ್​ ಮತ್ತು ಡಾ. ಶರತ್​ ರಾವ್​, ಮಾಹೆ ಹಳೆ ವಿದ್ಯಾರ್ಥಿಗಳ ಸಂಪರ್ಕಾಧಿಕಾರಿ ಡಾ. ರೋಹಿತ್​ ಸಿಂಗ್​, ಡಾ. ಸುಬ್ರಹ್ಮಣ್ಯ ಭಟ್​, ಅನೂಪ್​ ಭಟ್​, ಸಚಿನ್​ ಭಾಗ್ವತ್​ ಮೊದಲಾದವರಿದ್ದರು.