ಜಿಲ್ಲೆ

ಗ್ಲೋಬಲ್ ಗಾರ್ನರ್ ಮೇಳಕ್ಕೆ ಭರ್ಜರಿ ಸಿದ್ಧತೆ: 17, 18ರಂದು ರಾಜಧಾನಿಯ ಅರಮನೆ ಮೈದಾನದಲ್ಲಿ ಆಯೋಜನೆ

ಬೆಂಗಳೂರು: ಗ್ಲೋಬಲ್ ಗಾರ್ನರ್ ಸಂಸ್ಥೆ ಮತ್ತು ವಿಜಯವಾಣಿ, ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ 17 ಮತ್ತು 18ರಂದು ‘ಗ್ಲೋಬಲ್ ಗಾರ್ನರ್ ಎಕ್ಸ್​ಪೋ’ ಆಯೋಜಿಸಲಾಗಿದೆ.

ಮೇಳವು ಅರಮನೆ ಮೈದಾನದಲ್ಲಿರುವ ಪ್ರಿನ್ಸಸ್ ಗಾಲ್ಪ್ ಗೇಟ್ 9ರಲ್ಲಿ ನಡೆಯಲಿದೆ. ಗ್ರಾಹಕರು ಮತ್ತು ಉತ್ಪಾದಕರು ಇಬ್ಬರಿಗೂ ಸಹಾಯವಾಗುವ ರೀತಿಯಲ್ಲಿ ಮೇಳವನ್ನು ಆಯೋಜಿಸ ಲಾಗಿದೆ. ಹೊಸದಾಗಿ ಬಿಜಿನೆಸ್ ಆರಂಭಿಸುವವರಿಗೆ ಮಾಹಿತಿ ನೀಡಲಾಗುತ್ತದೆ. ಹೊಸದಾಗಿ ಉತ್ಪನ್ನಗಳನ್ನು ತಯಾರಿಸುವ ವರಿಗೆ ಮಾರುಕಟ್ಟೆ ಕಲ್ಪಿಸಲು ಬೇಕಾದ ಸಿದ್ಧತೆಗಳನ್ನು ಮೇಳದಲ್ಲಿ ತಿಳಿಸಿಕೊಡಲಾಗುತ್ತದೆ.

ಈ ಕುರಿತು ಮಾತನಾಡಿದ ಗ್ಲೋಬಲ್ ಗಾರ್ನರ್ ಸಂಸ್ಥೆ ಕರ್ನಾಟಕ ಮತ್ತು ಗೋವಾ ಮಾರುಕಟ್ಟೆ ಮುಖ್ಯಸ್ಥ ದೇವರಾಜ್, ಇದೊಂದು ಬಹು ಆಯಾಮದ ಮೇಳವಾಗಿದೆ. ಇಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ವ್ಯಾಪಾರಿಗಳು, ಗ್ರಾಹಕರು, ಉತ್ಪಾದಕರು, ನವೋದ್ಯಮ ಆರಂಭಿಸಲು ಚಿಂತನೆ ನಡೆಸುತ್ತಿರುವವರು, ಹೊಸದಾಗಿ ಬಿಜಿನೆಸ್ ಆರಂಭಿಸಲು ಸಹಾಯ ಬಯಸುತ್ತಿರುವವರು- ಹೀಗೆ ಸೇರಿ ವರ್ಗದ ಜನರಿಗೆ ಈ ಮೇಳವು ಸಹಾಯವಾಗಲಿದೆ ಎಂದು ವಿವರಿಸಿದರು.

ಹೊಸದಾಗಿ ಉತ್ಪನ್ನಗಳನ್ನು ತಯಾರಿಸಿ ಮಾರ್ಕೆಟ್ ಮಾಡುವುದು ಹೇಗೆಂದು ತಿಳಿಯದಿದ್ದರೆ, ಮೇಳದಲ್ಲಿ ವೇದಿಕೆ ಕಲ್ಪಿಸಲಾಗುತ್ತದೆ. ಈಗಾಗಲೇ ಮಾರುಕಟ್ಟೆ ಮಾಡುತ್ತಿರುವವರಿಗೆ ವಿಸ್ತರಣೆಗೆ ಕೌಶಲದ ಬಗ್ಗೆ ತಿಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಗ್ಲೋಬಲ್ ಗಾರ್ನರ್ ಸಂಸ್ಥೆಯಲ್ಲಿ 20 ಕೋಟಿಗೂ ಹೆಚ್ಚಿನ ವಸ್ತುಗಳಿದ್ದು, ಸುಲಭವಾಗಿ ಆನ್​ಲೈನ್ ಮತ್ತು ಆಫ್​ಲೈನ್​ನಲ್ಲಿ ಖರೀದಿಸಬಹುದಾಗಿದೆ.

‘ಗ್ಲೋಬಲ್ ಗಾರ್ನರ್ ಎಕ್ಸ್​ಪೋ’ ಬಹು ಆಯಾಮದ ಮೇಳವಾಗಿದೆ. ಗ್ರಾಹಕರು, ಉತ್ಪಾದಕರು, ವ್ಯಾಪಾರಿಗಳು ಹಾಗೂ ಹೊಸದಾಗಿ ಬಿಜಿನೆಸ್ ಶುರು ಮಾಡಲು ಚಿಂತನೆ ನಡೆಸುತ್ತಿರುವವರಿಗೆ ವೇದಿಕೆಯಾಗಿದೆ. ಪ್ರತಿಯೊಬ್ಬರೂ ಈ ವೇದಿಕೆಯನ್ನ ಬಳಸಿಕೊಳ್ಳಬೇಕು. | ದೇವರಾಜ್ ಗ್ಲೋಬಲ್ ಗಾರ್ನರ್, ಸಂಸ್ಥೆ ಕರ್ನಾಟಕ ಮತ್ತು ಗೋವಾ ಮಾರುಕಟ್ಟೆ ಮುಖ್ಯಸ್ಥ

17ರಂದು ಉದ್ಘಾಟನೆ

ಗ್ಲೋಬಲ್ ಗಾರ್ನರ್ ಎಕ್ಸ್​ಪೋ’ವನ್ನು ಅವಧೂತ ವಿನಯ್ ಗುರೂಜಿ ಶನಿವಾರ (ಡಿ.17) ಬೆಳಗ್ಗೆ 10.30 ಗಂಟೆ ಚಾಲನೆ ನೀಡಲಿದ್ದಾರೆ. ಈ ವೇಳೆ ಸಂಸ್ಥೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ (ಸಿಎಂಡಿ) ವಿಕಾಸ್ ರಾವತ್ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಏನೆಲ್ಲ ಇರಲಿದೆ?

* ಆಹಾರ ಮೇಳ

* ಹೊಸದಾಗಿ ಬಿಜಿನೆಸ್ ಆರಂಭಿಸುವವರಿಗೆ ಅವಕಾಶ

* ಯಾವುದೇ ಕ್ಷೇತ್ರದ ಫ್ರಾಂಚೈಸಿ ಮಾರಲು/ಕೊಳ್ಳಲು ಅವಕಾಶ

* ಬಿಜಿನೆಸ್ ವೃದ್ಧಿಸಲು ಹೊಸ ಚಿಂತನೆಗಳಿಗೆ ವೇದಿಕೆ

* ಟ್ರಾವೆಲ್ ಬಿಜಿನೆಸ್ ಆರಂಭಿಸಲು ಯೋಚನೆ ಮಾಡುತ್ತಿರುವವರಿಗೆ ಮಾರ್ಕೆಟ್ ಮಾಡಲು ಬೇಕಾದ ಸೌಲಭ್ಯಗಳು

* ಇತರೆ ಮತ್ತಷ್ಟು ಅವಕಾಶಗಳು ಒಂದೇ ವೇದಿಕೆಯಲ್ಲಿ ಲಭ್ಯ