ಜಿಲ್ಲೆ

ಗೋಕಾಕದಲ್ಲಿ ಚಂದುಕಾಕಾ ಚಿನ್ನಾಭರಣ‌ ಮಳಿಗೆ ಆರಂಭ

ಮಂಜುನಾಥ ಕೋಳಿಗುಡ್ಡ

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಗೋಕಾಕ ನಗರದ ಹೊಸಪೇಟೆ ಗಲ್ಲಿಯ ಬಸ್‌ ನಿಲ್ದಾಣ ರಸ್ತೆಯಲ್ಲಿ‘ಚಂದುಕಾಕಾ ಸರಾಫ್ ಜ್ಯುವೆಲ್ಸ್’ನ ನೂತನ ಮಳಿಗೆಯನ್ನು ಯುವ ಮುಖಂಡ ಅಮರನಾಥ ಜಾರಕಿಹೊಳಿ ಉದ್ಘಾಟಿಸಿದರು.

ಗುರುವಾರ ನಡೆದ‌ ಮಳಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಚಂದುಕಾಕಾ ಸರಾಫ್‌ನ ಸಂಚಾಲಕ ಅತುಲ್‌ ಜಿನದತ್ತ ಶಹಾ, ಸಂಗೀತಾ ಶಹಾ, ಸಿದ್ದಾರ್ಥ ಶಹಾ, ಆದಿತ್ಯ ಶಹಾ, ಜಿಪಂನ ಮಾಜಿ ಸದಸ್ಯ ಕಾಗಲ್ , ಅಥಣಿಯ ಅರುಣ ಯಲಗುದ್ರಿ ಇತರರಿದ್ದರು.

ಬಳಿಕ ಅಮರನಾಥ ಜಾರಕಿಹೊಳಿ ಮಾತನಾಡಿ, ಅವರು, ಸಾಂಪ್ರದಾಯಿಕವಾದ ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣ ಮಾರಾಟ ಮಾಡುವಲ್ಲಿ ಮುಂಚೂಣಿಯಲ್ಲಿರುವ ‘ಚಂದುಕಾಕಾ ಸರಾಫ್ ಜ್ಯುವೆಲ್ಸ್ ಮಳಿಗೆ ಗೋಕಾಕ ನಗರದಲ್ಲಿ ಆರಂಭವಾಗುತ್ತಿರುವುದು ಹೆಮ್ಮೆಯ ವಿಷಯ. ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ಅನುಕೂಲ ವಾಗಲಿದೆ ಎಂದರು.

ಚಂದುಕಾಕಾ ಸರಾಫ್‌ನ ಸಂಚಾಲಕ ಅತುಲ್‌ ಜಿನದತ್ತ ಶಹಾ‌ ಮಾತನಾಡಿ, ವಿಶಿಷ್ಟ ವಿನ್ಯಾಸದ ಮತ್ತು ಸಾಂಪ್ರದಾಯಿಕವಾದ ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣ ಮಾರಾಟ ಮಾಡುವಲ್ಲಿ ಮುಂಚೂಣಿಯಲ್ಲಿರುವ ‘ಚಂದುಕಾಕಾ ಸರಾಫ್ ಜ್ಯುವೆಲ್ಸ್’ ನ 13ನೇ ಶಾಖೆಯನ್ನು ಗೋಕಾಕದಲ್ಲಿ ಆರಂಭಿಸುತ್ತಿದ್ದೇವೆ. ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿನಂತಿಸಿದರು.