ರಾಯಬಾಗ: ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಆಶಾಕಿರಣ ದೃಷ್ಟಿ ಕೇಂದ್ರದಲ್ಲಿ ಹಿರಿಯ ನಾಗರಿಕರು ಸೇರಿ ಪ್ರತಿಯೊಬ್ಬರಿಗೂ ನೇತ್ರ ತಪಾಸಣೆ ನಡೆಸಿ ಉಚಿತ ಕನ್ನಡಕ ನೀಡಲಾಗುತ್ತದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿಮಾಂಧ್ಯತೆ ನಿಯಂತ್ರಣ ಕಾರ್ಯಕ್ರಮದಡಿ ಪ್ರಾರಂಭಿಸಿರುವ ಆಶಾಕಿರಣ ದೃಷ್ಟಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ಕಣ್ಣಿನ ಪೊರೆ, ಡಯಾಬಿಟಿಕ್ ರೆಟಿನೋಪತಿ ಹಾಗೂ ಇತರ ಸಮಸ್ಯೆ ಕಂಡು ಬಂದಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡುವರು ಎಂದು ತಿಳಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಂಕರಗೌಡ ಪಾಟೀಲ ಮಾತನಾಡಿದರು.
ಮುಖ್ಯ ವೈದ್ಯಾಧಿಕಾರಿ ಡಾ.ಆರ್.ಎಚ್.ರಂಗಣ್ಣವರ, ನೇತ್ರ ತಜ್ಞೆ ಡಾ.ವೀಣಾ ಕರೆಪ್ಪಗೋಳ, ಅರಿವಳಿಕೆ ತಜ್ಞ ಡಾ.ವಿನೋದ ಗಸ್ತಿ, ದಂತ ವೈದ್ಯ ಡಾ.ಸಿದ್ದಾರ್ಥ ಮಗದುಮ್ಮ, ಡಾ.ಸದಾಶಿವ ಖನದಾಳೆ, ಡಾ.ಶ್ರೀಹರಿ ಪೋಳ, ಶ್ರೀಶೈಲ ಶಿರೂರ, ಜ್ಯೋತಿ ಘಾಳಿ, ಸತೀಶ ರೋಗಿ, ಶೋಭಾ ಸಂಕನ್ನವರ ಇತರರಿದ್ದರು.