ಕೋಟ: ಕೋಟ ಗ್ರಾಮ ಪಂಚಾಯಿತಿ ಮಣೂರು ನಡುಬೆಟ್ಟು ವ್ಯಾಪ್ತಿಯ ಕೃಷಿ ಭೂಮಿ ಮದ್ಯ ಬಾಟಲಿಗಳ ಹಾವಳಿಗೆ ತುತ್ತಾಗುತ್ತಿದ್ದು, ಇದಕ್ಕೆ ಶೀಘ್ರ ಕಡಿವಾಣ ಹಾಕುವಂತೆ ರೈತರು ಆಗ್ರಹಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ನಡುಬೆಟ್ಟಿನಿಂದ ಮಣೂರು ಪಡುಕರೆ ಕರಾವಳಿ ರಸ್ತೆಯ ಅಕ್ಕಪಕ್ಕವಿರುವ ಕೃಷಿ ಭೂಮಿಯಲ್ಲಿ ಮದ್ಯ ಬಾಟಲಿಗಳ ಹಾವಳಿ ಜೋರಾಗಿದೆ.
ಭತ್ತ ಕಟಾವಿನ ಸಂದರ್ಭ ಮದ್ಯ ಬಾಟಲಿಗಳು ಯಂತ್ರಕ್ಕೆ ಸಿಲುಕಿ ಕೃಷಿ ಭೂಮಿ ಗಾಜುಮಯವಾಗಿದೆ. ಇದರಿಂದ ಕೆಲಸಗಾರರು ಗದ್ದೆಗೆ ಇಳಿಯಲು ಭಯಪಡಬೇಕಾಗಿದೆ. ಕೃಷಿ ಭೂಮಿಗಳಲ್ಲದೆ ನೀರಿನ ಹೊಳೆ, ಚರಂಡಿಗಳಲ್ಲಿ ಮದ್ಯ ಬಾಟಲಿಗಳ ಹಾವಳಿ ವಿಪರೀತವಾಗಿದೆ. ರಸ್ತೆ ಬದಿ ಚೀಲ ಚೀಲಗಳಲ್ಲಿ ಬಾಟಲಿಗಳನ್ನು ಇರಿಸುತ್ತಿದ್ದು, ಬಾರಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಮಣೂರು ಹೊಸ ರಸ್ತೆಯಲ್ಲಿ ಮದ್ಯ ವ್ಯಸನಿಗಳ ಸಮಸ್ಯೆಗೆ ಈ ಹಿಂದೆ ಇದೇ ರೀತಿಯ ದೂರಿನ ಹಿನ್ನಲ್ಲೆಯಲ್ಲಿ ಆಗಿನ ಪಿಎಸ್‌ಐ ಕ್ರಮ ಕೈಗೊಂಡಿದ್ದರು. ಪ್ರಸ್ತುತ ಪಿಎಸ್‌ಐಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಬೀಟ್ ವ್ಯವಸ್ಥೆ ಮತ್ತಷ್ಟು ಗಟ್ಟಿಗೊಳಿಸಲು ಸೂಚಿಸಲಿದ್ದೇವೆ. ಸುರೇಶ್ ಬಂಗೇರ, ಕೋಟ ಪಿಡಿಒ ಕೃಷಿಕರು, ಜನಸಾಮಾನ್ಯರ ಅನುಕೂಲಕ್ಕೆ ರಸ್ತೆ ನಿರ್ಮಾಣ ಮಾಡಲಾಗಿದೆ. ಸಮಸ್ಯೆಗೆ ಮುಕಿ ಕೊಡಲು ಸಂಬಂಧಪಟ್ಟ ಇಲಾಖೆಗೆ ದೂರು ನೀಡಲಿದ್ದು, ವ್ಯಸನಿಗಳು ಮನೆ ಅಥವಾ ಬಾರ್‌ನಲ್ಲಿ ಮದ್ಯಪಾನ ಮಾಡಬಹುದು. ಆದರೆ ಕೃಷಿ ಅಥವಾ ಸೇತುವೆ ಉಪಯೋಗಿಸಿಕೊಳ್ಳುತ್ತಿರುವುದು ಖೇದಕರ. ಎಂ.ಜಯರಾಮ ಶೆಟ್ಟಿ, ಕೋಟ ರೈತಧ್ವನಿ ಸಂಘ ಅಧ್ಯಕ್ಷ