ಜಿಲ್ಲೆ

ಗಾಜಿನ ಬಾಟಲಿಗಳು ಬದುಕಿಗೆ ಆಸರೆ

ಇಂದಿರಾ ಎನ್ ಕೆ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಸ್ವಚ್ಛ ಭಾರತ ಪರಿಕಲ್ಪನೆಯಿಂದಇತ್ತೀಚಿನ ವರ್ಷದಲ್ಲಿ ಪ್ರತಿ ಮನೆಯಿಂದ ಗ್ರಾಮ ಮಟ್ಟದಲ್ಲಿ ಪರಿವರ್ತನೆ ಕಂಡುಬಂದಿದೆ. ದೇಶದಾದ್ಯಂತ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್, ಹಸಿ ಮತ್ತು ಒಣಕಸವನ್ನು ಒಟ್ಟುಗೂಡಿಸಿ ಅದನ್ನು ಸಂಪನ್ಮೂಲವಾಗಿ ವಾಡಿ ಅನೇಕ ಜನರಿಗೆ ಉದ್ಯೋಗ ಮತ್ತು ಪಂಚಾಯಿತಿಗೆ ಆರ್ಥಿಕ ಶಕ್ತಿ ತುಂಬುವ ಕಾರ್ಯವಾಗುತ್ತಿದೆ. ಆದರೆ ಗಾಜಿನ ಬಾಟಲಿಗಳನ್ನು ಸಂಗ್ರಹಿಸುವ ಅಥವಾ ಒಟ್ಟುಗೂಡಿಸುವ ಕಾರ್ಯ ನಡೆದಿಲ್ಲ. ಆದರೆ ಈಗ ಬ್ರಹ್ಮಾವರ ಚೇರ್ಕಾಡಿ, ಬೆನಗಲ್ ಸಮೀಪ ವಾಸ ವಾಡಿಕೊಂಡಿರುವ ಮಹಾರಾಷ್ಟ್ರ ಮೂಲದ 25 ಮಂದಿ 20 ವಾಹನದ ಮೂಲಕ ಪ್ರತಿ ಊರು ಕೇರಿಯ ರಸ್ತೆ ಬದಿಯಲ್ಲಿ ಎಸೆದು ಹೋದ ಸೀಸದ ಬಾಟಲಿಯನ್ನು ಸಂಗ್ರಹಿಸಿ ಸ್ವಚ್ಛ ಭಾರತ ಪರಿಕಲ್ಪನೆಗೆ ಹೊಸ ರೂಪ ನೀಡಿದ್ದಾರೆ ಈ ಅನಕ್ಷರಸ್ಥರು. ಜಿಲ್ಲೆಯ ಎಲ್ಲ ಭಾಗದ ರಸ್ತೆಯಲ್ಲಿ ಸಂಚರಿಸಿ ಬಾಟಲಿ, ಗಾಜಿನ ಬಳೆ ಸೇರಿದಂತೆ ಸೀಸದಿಂದ ತಯಾರಾದ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಬಾಟಲಿಗಳನ್ನು ಪುಡಿವಾಡಿ 25 ಟನ್‌ನಷ್ಟು ಆದ ಬಳಿಕ ಉತ್ತಮ ವಾರುಕಟ್ಟೆಗೆ ನೀಡಿ ಬದುಕು ಕಟ್ಟಿಕೊಂಡು ವಾದರಿಯಾಗಿದ್ದಾರೆ. ಜಿಲ್ಲೆಯ ಯಾವುದೇ ಗ್ರಾಮ ಪಂಚಾಯಿತಿ ಮನೆಗಳಲ್ಲಿ ನಿರುಪಯುಕ್ತ ಬಾಟಲಿಗಳು ಇದ್ದರೆ ಇವರನ್ನು ಸಂಪರ್ಕಿಸಬಹುದು.

ನಾವು ಮೂಲತಃ ಮಹಾರಾಷ್ಟ್ರವಾದರೂ ಕರ್ನಾಟಕಕ್ಕೆ ಬಂದು ಹಲವಾರು ವರ್ಷವಾಗಿದೆ. ಬ್ರಹ್ಮಾವರ ಬಳಿಯ ಬೆನಗಲ್‌ನಲ್ಲಿ 25 ಮಂದಿ ಇದ್ದು, ಬಾಟಲಿ ಸಂಗ್ರಹ ವಾಡಿ ಅದನ್ನು ಪುಡಿವಾಡಿ ಮತ್ತೆ ವಾರಾಟ ವಾಡಿ ಜೀವನ ನಡೆಸುತ್ತಿದ್ದೇವೆ. -ಬಾಬು, ಬಾಟಲಿ ಚ್ಟ ಸಂಗ್ರಹಕಾರ ಬಾರಕೂರು ಭಾಗದಲ್ಲಿ ಇವರ ತಂಡ ಬಾಟಲಿ ಸಂಗ್ರಹ ವಾಡುತ್ತಿರುವುದನ್ನು ಕಂಡು ವಿಚಾರಿಸಿದೆ. ಇವರ ಉತ್ತಮ ಕಾರ್ಯ ಕಂಡು ನಮ್ಮ ಮನೆ ಬಳಿಯಲ್ಲಿ ಹಲವಾರು ವರ್ಷದಿಂದ ರಾಶಿ ಇದ್ದ ಬಾಟಲಿಗಳನ್ನು ಇವರಿಗೆ ಕೊಟ್ಟಿದ್ದೇನೆ. -ಗಣೇಶ್ ಗಾಣಿಗ, ಹನೆಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ