ಮಹಾಲಿಂಗಪುರ: ಮೌಲ್ಯಯುತ ಜನಸೇವೆಯಲ್ಲಿಯೇ ಸರ್ವಸ್ವವನ್ನು ಕಾಣುವ ಚನಬಸು ಹುರಕಡ್ಲಿ ದಂಪತಿ ಕಾರ್ಯ ಶ್ಲಾಘನೀಯ ಎಂದು ಹಂದಿಗುಂದದ ಚನ್ನಬಸವ ಗುರೂಜಿ ಹೇಳಿದರು.
ಸ್ಥಳೀಯ ಬಸವನಗರದ ಸಮುದಾಯ ಭವನದಲ್ಲಿ ಸಿ.ಎಂ. ಹುರಕಡ್ಲಿ ೌಂಡೇಶನ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಮಹಿಳೆಯರಿಗೆ ಉಚಿತ ಆರಿ ವರ್ಕ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಯ ಮತ್ತು ಉಸಿರು ಬದುಕಿನ ಅತ್ಯಮೂಲ್ಯ ಅಂಶಗಳು.ಸಮಸ್ಯೆಗಳಿಗೆ ಅಜ್ಞಾನವೇ ಕಾರಣ. ದುರಾಸೆಗಳನ್ನು ತ್ಯಜಿಸಿ ಬದುಕನ್ನು ಸುಂದರವಾಗಿಸಿಕೊಳ್ಳಿ ಎಂದರು.
ಚನಬಸು ಹುರಕಡ್ಲಿ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾದರೆ ಸಮಾಜ ಮತ್ತು ದೇಶದ ಅಭಿವೃದ್ಧಿ ಸಾಧ್ಯ. ನಮ್ಮ ೌಂಡೇಶನ್ ವತಿಯಿಂದ ನಿರಂತರವಾಗಿ ಸ್ವಾವಲಂಬನೆ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಅವರಿಗೆ ಕಾರ್ಮಿಕ ಇಲಾಖೆಯ ಕಾರ್ಡ್ ಕೊಡಿಸಿ ಸರ್ಕಾರದ ಸೌಲಭ್ಯ ದೊರೆಯುಂತೆ ಮಾಡಿ ಆರ್ಥಿಕ ಸದೃಢತೆ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು.
ಪುರಸಭೆ ಉಪಾಧ್ಯಕ್ಷೆ ಶೀಲಾ ಬಾವಿಕಟ್ಟಿ, ಬೆಳಗಲಿ ಪಪಂ ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ, ಮುಖಂಡರಾದ ಹಣಮಂತ ಕೊಣ್ಣೂರ, ಬಸವರಾಜ ಪೂಜಾರಿ ಮಾತನಾಡಿದರು.
ತರಬೇತುದಾರರಾದ ತಾಯವ್ವ ಪಾಟೀಲ, ರಶ್ಮಿ ಬಳ್ಳೂರ, ಉಮಾ ಪೂಜಾರಿ ಅವರು 80 ದಿನಗಳಿಂದ ಉಚಿತವಾಗಿ ಜರುಗಿದ ತರಬೇತಿಯಲ್ಲಿ ಮಹಿಳೆಯರಿಗೆ ಸೀರೆ, ಜಂಪರ್, ಚೂಡಿದಾರದ ಮೇಲೆ ಆರಿ ವರ್ಕ್‌ನ ಕೌಶಲ ಕಲಿಸಿದರು.
ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ, ಮುಖಂಡರಾದ ಸಂಜು ಬಾರಕೋಲ, ಶ್ರೀಶೈಲಪ್ಪ ಬಾಡನವರ, ಮಹಾದೇವ ಟಿರಿಕಿ, ಪ್ರಕಾಶ ಬಾಡನವರ, ಗಣೇಶ ಶಿರೋಳ, ಎಂ.ಡಿ. ಆನಂದ, ಭೀಮಶಿ ಪೂಜಾರಿ, ಬಸವರಾಜ ಗಿರಿಸಾಗರ ಮತ್ತಿತರರಿದ್ದರು. ಸಾಧಕರನ್ನು ಸನ್ಮಾನಿಸಲಾಯಿತು ಹಾಗೂ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ನೀಡಲಾಯಿತು.