ಲಿಂಗಸುಗೂರು: ತಾಲೂಕಿನ ಅಂಗನವಾಡಿ ನೌಕರರಿಗೆ ಗೌರವಧನ ಬಿಡುಗಡೆ ಹಾಗೂ ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ನೌಕರರು ಎಸಿ ಬಸವಣೆಪ್ಪ ಕಲಶೆಟ್ಟಿಗೆ ಸೋಮವಾರ ಮನವಿ ಸಲ್ಲಿಸಿದರು.
ಅಂಗವಾಡಿ ಕೇಂದ್ರಗಳ ಬಾಲವಿಕಾಸ ಸಮಿತಿಗೆ ಮೊಟ್ಟೆ ಹಣ ಪಾವತಿಸಬೇಕು. ಕಾರ್ಯಕರ್ತರ ಗೌರವ ಧನದಲ್ಲಿ ಪ್ರತಿ ತಿಂಗಳು 50 ರಿಂದ 100ರೂ. ಕಡಿತವಾಗುವುದನ್ನು ತಡೆಯಬೇಕು. ಅಂಗನವಾಡಿ ಕಾರ್ಯಕರ್ತೆಯರ ಅ. 2024 ರ ಗೌರವಧನ ಹಾಗೂ ಮುಂಗಡ ರಸೀದಿ ಪಡೆದ ಎರಡು ಸಾವಿರ ರೂ., ಬೇರೆ ಕೇಂದ್ರಗಳ ಪ್ರಭಾರಿ ಪ್ರೋತ್ಸಹ ಧನ, ನಿವೃತ್ತಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಇಡುಗಂಟು, ಮರಣ ಪರಿಹಾರ ಬಿಡುಗಡೆ ಮಾಡಬೇಕು.
2,017 ರಿಂದ ನನೆಗುದಿಗೆ ಬಿದ್ದಿರುವ ಸಿಡಿಪಿಒ ಕಾರ್ಯಾಲಯ ಮತ್ತು ಸ್ತ್ರೀ ಶಕ್ತಿ ಭವನ ಕೂಡಲೆ ನಿರ್ಮಾಣ ಮಾಡಬೇಕು. 1,993 ಇಲಾಖೆಯ ಕಟ್ಟಡ ಪಶು ಆಸ್ಪತ್ರೆಯ ಆವರಣದ ಕಟ್ಟಡ ಮತ್ತು ಮಹಿಳಾ ಒಕ್ಕೂಟವನ್ನು ಕೂಡಲೇ ಇಲಾಖೆಯ ಅಧೀನಕ್ಕೆ ಪಡೆಯಬೇಕು. ಲಿಂಗಸುಗೂರು, ಮಸ್ಕಿ ತಾಲೂಕಿನಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹುದ್ದೆ ಭರ್ತಿ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.