ಕಂಪ್ಲಿಯಲ್ಲಿ ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖಗೆ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಮನವಿ ಸಲ್ಲಿಸಿತು. ಪ್ರಮುಖರಾದ ಕರಿಯಪ್ಪ ಗುಡಿಮನಿ, ವಸಂತರಾಜ ಕಹಳೆ, ಇ.ಧನಂಜಯ, ನೀಲಪ್ಪ ಪೇಂಟರ್, ಎಚ್.ಕುಮಾರಸ್ವಾಮಿ, ಎಸ್.ಬಸವರಾಜ ಇತರರಿದ್ದರು. 
ಜಿಲ್ಲೆ

ಬಡ ಕುಟುಂಬಗಳಿಗೆ ಪಟ್ಟಾ ಕೊಡಿ

ಕಂಪ್ಲಿ: ತಾಲೂಕಿನ ನೆಲ್ಲೂಡಿ ಗ್ರಾಮದ ಸರ್ಕಾರಿ ಜಾಗದಲ್ಲಿ ವಾಸವಿರುವ ಬಡ ಜನರಿಗೆ ಪಟ್ಟಾ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸೋಮವಾರ ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖಗೆ ಮನವಿ ಸಲ್ಲಿಸಿದರು.

ವೇದಿಕೆ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ಮಾತನಾಡಿ, ಸರ್ವೇ ನಂ.133/ಬಿ ಪೈಕಿ 5.72 ಎಕರೆ ಭೂಮಿಯಿದ್ದು, ಇದರಲ್ಲಿ 4.19 ಎಕರೆ ಸರ್ಕಾರಿ ಜಾಗದಲ್ಲಿ ಬಡಕುಟುಂಬಗಳು ವಾಸವಾಗಿವೆ. ಇದರಲ್ಲೇ ಉಳಿದ ಜಾಗವನ್ನು ಅನಾಮಿಕ ವ್ಯಕ್ತಿಗಳು ಮಾರಾಟಕ್ಕೆ ಮುಂದಾಗಿದ್ದು, ತಕ್ಷಣ ಕ್ರಮಕೈಗೊಳ್ಳಬೇಕು. ವಸತಿ ಇರುವ ಕುಟುಂಬಗಳಿಗೆ ಪಟ್ಟಾ ಕೊಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಎ.ಎಸ್.ಯಲ್ಲಪ್ಪ, ಇ.ಧನಂಜಯ, ಮೆಟ್ರಿ ಎಚ್.ಕುಮಾರಸ್ವಾಮಿ, ಕೃಷ್ಣಮೂರ್ತಿ, ಎಸ್.ಆರ್.ಪುರ ಸೋಮಯ್ಯ, ರಾಮಕೃಷ್ಣ, ಯಲ್ಲಪ್ಪ ಮುದ್ದಾಪುರ, ಯರ‌್ರಿಸ್ವಾಮಿ, ಕುಮಾರ್, ರಾಕೇಶ್, ಹುಲುಗಪ್ಪ, ಹನುಮಂತ ಇತರರಿದ್ದರು.