ದೇವರಹಿಪ್ಪರಗಿ: ಸ್ವಾತಂತ್ರೃ ಹೋರಾಟಗಾರ, ಶೋಷಿತರ ಧ್ವನಿ, ರೈತರ ಉಸಿರಾಗಿದ್ದ ಡಾ.ಬಾಬು ಜಗಜೀವನರಾಮ್ ಅವರ ಜೀವನ ಮತ್ತು ಸಾಧನೆ ಸರ್ವರಿಗೂ ಮಾದರಿಯಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಪಿ. ಬಿರಾದಾರ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ನಡೆದ ಡಾ. ಬಾಬು ಜಗಜೀವನರಾಮ್ ಅವರ 118ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಾಬೂಜಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದರು.
ತಹಸೀಲ್ದಾರ್ ಪ್ರಕಾಶ ಸಿಂದಗಿ ಬಾಬೂಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಉಪತಹಸೀಲ್ದಾರ್ ಸುರೇಶ ಮ್ಯಾಗೇರಿ, ಸಿಬ್ಬಂದಿ ಸಂತೋಷ ತಳವಾರ, ಚನ್ನಬಸು ಹೊಸಮನಿ, ರೈತ ಸಂಘದ ಸಂಪತ್ ಜಮಾದಾರ, ರಾಹುಲ್ ದೊಡಮನಿ, ಸಂತೋಷ ಬೇವಿನಗಿಡದ, ಕಿರಣ ವಗ್ಗರ, ನಾಗೇಶ ವಗ್ಗರ, ಭೀಮಾಶಂಕರ ವಗ್ಗರ, ಪರಶು ಸನದಿ, ಪ್ರಭು ಸಂಗಣ್ಣವರ, ಸುರೇಶ ಮಣೂರ, ಮರಣಿಂಗಪ್ಪ ಪಡಗಾನೂರ, ಸದಾಶಿವ ಬೇವಿನಗಿಡದ, ಪ್ರಭು ದೊಡಮನಿ, ನಿಜಲಿಂಗಪ್ಪ ಮ್ಯಾಕೇರಿ ಇದ್ದರು.