ಬಸವನಬಾಗೇವಾಡಿ ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಬಸವಸೈನ್ಯ ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಶಂಕರಗೌಡ ಬಿರಾದಾರ, ಸಂಜು ಬಿರಾದಾರ, ಶ್ರೀಕಾಂತ ಕೊಟ್ರಶೆಟ್ಟಿ, ಬಸವರಾಜ ಗೊಳಸಂಗಿ ಇತರರಿದ್ದರು. 
ಜಿಲ್ಲೆ

ಪಹಲ್ಗಾಮ್ ಪ್ರಕರಣದ ಭಯೋತ್ಪಾಕರಿಗೆ ಕಠಿಣ ಶಿಕ್ಷೆ ನೀಡಿ

ಬಸವನಬಾಗೇವಾಡಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ದಲ್ಲಿ ಪ್ರವಾಸಿಗರ ಮೇಲೆ ಮಂಗಳವಾರ ನಡೆದ ಭಯೋತ್ಪಾದಕರ ದಾಳಿ ಖಂಡಿಸಿ ಪಟ್ಟಣದಲ್ಲಿ ಬುಧವಾರ ರಾಷ್ಟ್ರೀಯ ಬಸವಸೈನ್ಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಪ್ರವಾಸಿ ಹಿಂದುಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ಜಿಹಾದಿಗಳು ಅಮಾಯಕರನ್ನು ಹತ್ಯೆ ಮಾಡಿದ್ದಾರೆ.

ಕೇಂದ್ರ ಸರ್ಕಾರ ಕೂಡಲೇ ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲಬೇಕು. ಕಾಶ್ಮೀರನ್ನು ಭಯೋತ್ಪಾದಕರಿಂದ ಮುಕ್ತಗೊಳಿಸಬೇಕು. ಈ ದಾಳಿ ಹಿಂದಿರುವ ಪಾಕಿಸ್ತಾನ್ ಭಯೋತ್ಪಾದನಾ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಲು ಆದೇಶ ಮಾಡಬೇಕೆಂದು ತಿಳಿಸಿದರು.

ರಾಷ್ಟ್ರೀಯ ಬಸವಸೈನ್ಯದ ತಾಲೂಕು ಅಧ್ಯಕ್ಷ ಸಂಜು ಬಿರಾದಾರ, ಮುಖಂಡರಾದ ಶ್ರೀಕಾಂತ ಕೊಟ್ರಶೆಟ್ಟಿ, ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸವರಾಜ ಗೊಳಸಂಗಿ, ಜಟ್ಟಿಂಗರಾಯ ಮಾಲಗಾರ, ಸಂಗಮೇಶ ಜಾಲಗೇರಿ, ಸಂತೋಷ ಚಿಂಚೋಳ್ಳಿ, ಮುದಕಪ್ಪ ಪಟ್ಟಣಶೆಟ್ಟಿ, ಮಂಜು ಜಾಲಗೇರಿ, ಸುರೇಶ ಹೂಗಾರ, ವೀರೇಶ ಗಬ್ಬೂರ, ಬಾಪು ಬಾಗೇವಾಡಿ, ನವೀನ್ ಬೇವನೂರ, ಎಂ.ಬಿ. ತೋಟದ, ಮಹಾಂತೇಶ ಹೆಬ್ಬಾಳ, ರಾಮಣ್ಣ ಕಲ್ಲೂರ ಇತರರಿದ್ದರು.