ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಖಂಡಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಮುಂದೆ ತಾಲೂಕು ಬೇಡ ಜಂಗಮ ಸಮಿತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಸಮಿತಿ ಅಧ್ಯಕ್ಷ ವೀರಯ್ಯಸ್ವಾಮಿ ಆಶಾಪುರ, ಪದಾಕಾರಿಗಳಾದ ಶರಣಬಸವ ಹಿರೇಮಠ, ಪ್ರಭು ಶಾಸಿ, ಎಸ್.ಜಿ.ಕಲ್ಲಯ್ಯ ಸ್ವಾಮಿ, ಸಿದ್ಧೇಶ ವಿರಕ್ತಮಠ, ಶಿವಶಂಕರ ಸ್ವಾಮಿ, ಸೋಮಶೇಖರ ಸ್ವಾಮಿ, ಜೆ.ಎಂ.ಶರಣಯ್ಯಸ್ವಾಮಿ, ಸುಲೋಚನಾ ಆಲ್ಕೂರು, ಅಂಬಮ್ಮ, ಸುಮತಿ ಶಾಸಿ ಇದ್ದರು. 
ಜಿಲ್ಲೆ

ನೇಹಾ ಹತ್ಯೆಗೈದವನಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಿ

ರಾಯಚೂರು: ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠಳನ್ನು ಬರ್ಬರವಾಗಿ ಕೊಲೆ ಮಾಡಿದ ಯಾಜ್‌ಗೆ ಕಠಿಣ ಶಿಕ್ಷೆ ವಿಸುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ತಾಲೂಕು ಬೇಡ ಜಂಗಮ ಸಮಿತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಘಟನೆಯಿಂದಾಗಿ ವಿದ್ಯಾರ್ಥಿ ಸಮೂಹದಲ್ಲಿ ಭಯದ ವಾತಾವರಣ ಮನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಯಾಜ್ ಕಾಲೇಜು ಆವರಣದಲ್ಲಿಯೇ ನೇಹಾಗೆ 9 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ. ಆರೋಪಿಯನ್ನು ಬಂಸಲಾಗಿದ್ದು, ಆತನಿಗೆ ಕಠಿಣ ಶಿಕ್ಷೆ ವಿಸುವ ಮೂಲಕ ಇತರರು ಇಂತಹ ಕೃತ್ಯ ಮಾಡದಂತೆ ನೋಡಿಕೊಳ್ಳಬೇಕು.
ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ ಘಟನೆ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಇದೊಂದು ಸಾಮಾನ್ಯ ಘಟನೆ ಎನ್ನುವಂತೆ ಮಾತನಾಡುವ ಮೂಲಕ ಒಂದು ಕೋಮಿನ ಜನರ ಮನವೊಲಿಕೆ ಮಾಡಲು ಮುಂದಾಗಿರುವುದು ಖಂಡನೀಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ವೀರಯ್ಯಸ್ವಾಮಿ ಆಶಾಪುರ, ಪದಾಕಾರಿಗಳಾದ ಶರಣಬಸವ ಹಿರೇಮಠ, ಪ್ರಭು ಶಾಸಿ, ಎಸ್.ಜಿ.ಕಲ್ಲಯ್ಯ ಸ್ವಾಮಿ, ಸಿದ್ಧೇಶ ವಿರಕ್ತಮಠ, ಶಿವಶಂಕರ ಸ್ವಾಮಿ, ಸೋಮಶೇಖರ ಸ್ವಾಮಿ, ಜೆ.ಎಂ.ಶರಣಯ್ಯಸ್ವಾಮಿ, ಸುಲೋಚನಾ ಆಲ್ಕೂರು, ಅಂಬಮ್ಮ, ಸುಮತಿ ಶಾಸಿ ಪಾಲ್ಗೊಂಡಿದ್ದರು.