ಸೇಡಂ: ತೀವ್ರ ಶೋಷಣೆ, ಅಸ್ಪÊಶ್ಯತೆ, ಅಸಮಾನತೆಯ ಮಧ್ಯೆ ಬದುಕು ನಡೆಸುತ್ತಿರುವ ಸವಿತಾ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಮೀಸಲಾತಿ ನೀಡಬೇಕು ಎಂದು ತಾಲೂಕು ಗೌರವಾಧ್ಯಕ್ಷ ಪರಮೇಶ್ವರ ಸುಲೇಪೇಟಕರ್ ಒತ್ತಾಯಿಸಿದರು.
ಸಹಾಯಕ ಆಯುಕ್ತರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಸೇವಾ ಮನೋಭಾವದಿಂದ ಕ್ಷೌರಿಕ ವೃತ್ತಿ, ನಾದಸ್ವರ ನುಡಿಸುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿz್ದೆÃವೆ. ಆದರೆ ಇಲ್ಲಿವರೆಗೂ ಸಮಾನತೆಯ ಬದುಕು ನಮ್ಮವರಿಗೆ ಸಿಕ್ಕಿಲ್ಲ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಸವಿತಾ ಸಮಾಜದದ ಸಮಗ್ರ ಅಭಿವೃದ್ಧಿಗೆ ಮೀಸಲಾತಿ ನೀಡಬೇಕು. ನಾಯಿಂದ ಪದವನ್ನು ಸವಿತಾ ಜಾತಿಯ ಕಾಲಂನಿAದ ಕೈಬಿಟ್ಟಿದ್ದು, ಕೂಡಲೇ ಮರು ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿದರು.
ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಮುಂಬರುವ ದಿನಗಳಲ್ಲಿ ಸಮಾಜದ ಶ್ರೀ ಸವಿತಾನಂದನಾಥ ಸ್ವಾಮಿಗಳ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ನಡೆಸಲಾಗುವುದು. ಅಲ್ಲದೆ ನಿರಂತರ ಹೋರಾಟಗಳನ್ನು ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾಲೂಕು ಅಧ್ಯಕ್ಷ ಚಂದ್ರಶೇಖರ ಸುನಾಯಿ, ಪ್ರಧಾನ ಕಾರ್ಯದರ್ಶಿ ರವಿಕಿರಣ ಪೊಟ್ಲಾಚಾರ, ಪ್ರಮುಖರಾದ ಬಸವರಾಜ ಕಿರಮನಕರ್, ರಾಘವೇಂದ್ರ ಚಿಟಕನಪಲ್ಲಿ, ರಾಮಲಿಂಗ ಬೀರನಹಳ್ಳಿ, ಸಿದ್ರಾಮ ಸುನಾಯಿ, ವೆಂಕಟೇಶ ಆಡಕಿ, ವಿಜಯಕುಮಾರ, ರಾಮಚಂದ್ರ ಕಿರನಮಕರ್, ಪವನ್ ಇತರರಿದ್ದರು.