ಜಿಲ್ಲೆ

ಜಾತಿ ಗಣತಿಯಲ್ಲಿ ಎಸ್​ಎಸ್​ಕೆಗೆ ಮಾನ್ಯತೆ ನೀಡಿ

ಆನಂದಕುಮಾರ ಅಂಗಡಿ

ಹುಬ್ಬಳಿ : ರಾಜ್ಯ ಸರ್ಕಾರ ನಡೆಸಲಿರುವ ಜಾತಿಗಣತಿಯಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ(ಎಸ್​ಎಸ್​ಕೆ) ಸಮುದಾಯ ಮತ್ತು ಅದರ ಉಪಜಾತಿಯನ್ನು ಗಣನೆಗೆ ತೆಗೆದುಕೊಂಡು, ಸೂಕ್ತ ಮಾನ್ಯತೆ ನೀಡಬೇಕು ಎಂದು ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಸಂತ ಲದ್ವಾ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಸಮುದಾಯದವರಿಗೂ ಸೌಲಭ್ಯ ಕಲ್ಪಿಸಬೇಕೆನ್ನುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾತಿಗಣತಿ ನಡೆಸಲು ತೀರ್ಮಾನಿಸಿದ್ದು, ಕಾಟಾಚಾರದ ಗಣತಿ ಇದಾಗಬಾರದು ಎಂದರು.

ಪ್ರತಿಯೊಂದು ಮನೆಗೆ ಭೇಟಿ ನೀಡಿ, ವಿವವರವಾದ ಮಾಹಿತಿ ಸಂಗ್ರಹಿಸುವಂತಾಗಬೇಕು ಎಂದು ಆಗ್ರಹಿಸಿದರು.

ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮುದಾಯದವರನ್ನು ಪಟೇಗರ್, ಪಟೇಗಾರ, ಸಾವಜಿ ಹಾಗೂ ಇನ್ನಿತರ ಹೆಸರುಗಳಿಂದ ಕರೆಯುತ್ತಾರೆ. ಆದರೆ, ಎಲ್ಲ ಸರ್ಕಾರಗಳು ನಮ್ಮ ಸಮುದಾಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಸೌಲಭ್ಯಗಳಿಂದ ವಂಚಿಸುತ್ತ ಬಂದಿವೆ ಎಂದು ದೂರಿದರು.

2 ಬಿ ಮೀಸಲಾತಿ ಅಡಿಯಲ್ಲಿ ಸಮುದಾಯವನ್ನು ಗುರುತಿಸಿದ್ದರೂ, ಶಿಕ್ಷಣ, ಉದೊ್ಯೕಗ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.