ಲೋಕಾಪುರದ ಸರ್ಕಾರಿ ಹಿರಿಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ಮಾರ್ಟ್ ಬೋರ್ಡ್ ಉದ್ಘಾಟನೆ ಕಾರ್ಯಕ್ರಮವನ್ನು ಸಚಿವ ಆರ್.ಬಿ. ತಿಮ್ಮಾಪೂರ ನೆರವೇರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಹಿರಿಯ ಮುಖಂಡ ಗುಲಾಬಸಾಬ ಅತ್ತಾರ ಇತರರಿದ್ದರು. 
ಜಿಲ್ಲೆ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ

Vijayapura - Desk - Gurappa Lokuri

ಲೋಕಾಪುರ: ಇಂದಿನ ದಿನಮಾನಗಳಲ್ಲಿ ಶಿಕ್ಷಣ ಪಡೆಯುವ ಮಕ್ಕಳಿಗೆ ಮೂಲ ಸೌಕರ್ಯ ಒದಗಿಸಿದರೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುದಾನ ಅಡಿಯಲ್ಲಿ ನೀಡಿರುವ ಸ್ಮಾರ್ಟ್ ಬೋರ್ಡ್ ಉದ್ಘಾಟಿಸಿ ಅವರು ಮಾತನಾಡಿದರು.

ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ಸಮಾಜದಲ್ಲಿ ಪ್ರತಿಭಾವಂತರಾಗಿ ಬೆಳೆಸಬೇಕೆಂದು ಎಂದು ಸಲಹೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಹಿರಿಯ ಮುಖಂಡ ಗುಲಾಬಸಾಬ ಅತ್ತಾರ, ಎಸ್‌ಡಿಎಂಸಿ ಅಧ್ಯಕ್ಷ ಶಬ್ಬೀರ ಅತ್ತಾರ, ಮಹಾನಿಂಗಪ್ಪ ಹುಂಡೇಕಾರ, ವೆಂಕಣ್ಣ ಅಂಕಲಗಿ, ವೆಂಕಣ್ಣ ಕಮಕೇರಿ, ಶಬ್ಬೀರ ಬಾಗವಾನ, ಯಶವಂತ ಮಾದರ, ಎಸ್.ಎಂ. ರಾಮದುರ್ಗ, ಅಬ್ದುಲ್ ರಹಿಮಾನ್ ತೊರಗಲ್, ಸುಲ್ತಾನ ಕಲಾದಗಿ, ಸೈಯ್ಯದ್ ಗುದಗಿ, ಜಾವೀದ್ ಮುಧೋಳ, ಕೆ.ಕೆ. ಬಾಗವಾನ, ಅಬ್ಬಾಸ್ ಅತ್ತಾರ, ಬಲರಾಮ ಸಾಳುಂಕೆ, ಪಾಲಕರು, ಮಕ್ಕಳು ಇದ್ದರು.