ಮುಧೋಳದಲ್ಲಿ ವಿಶ್ವ ಹಿಂದು ಪರ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಬಸವರಾಜ ಮಹಾಲಿಂಗೇಶ್ವರಮಠ, ಅಮೃತ ಯರಗಟ್ಟಿ, ಅಜಯ್ ಬಾಗಿ, ಬಸವರಾಜ ಬೆಳಗಲಿ, ಕಿರಣ ಸಣ್ಣಕ್ಕಿ, ಮಂಜುನಾಥ ಕುಂದರಗಿ, ಕುಮಾರ ಗಲಗಲಿ, ಸದಾಶಿವ ಬಾಗಿ, ದಶರಥ ರಜಪೂತ, ಗಂಗಾಧರ ಗೋಡೆ, ಸವಿತಾ ಅಂಗಡಿ ಇದ್ದರು. 
ಜಿಲ್ಲೆ

ಜೈನಮುನಿಗಳಿಗೆ ರಕ್ಷಣೆ ಕೊಡಿ

Vijayapura - Desk - Gurappa Lokuri

ಮುಧೋಳ: ರಾಜ್ಯದಲ್ಲಿ ಜೈನ ಮುನಿಗಳು ಹಾಗೂ ಹಿಂದು ಕಾರ್ಯಕರ್ತರಿಗೆ ರಕ್ಷಣೆ ಒದಗಿಸಬೇಕು. ಹಂತಕರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಹಿಂದು ಪರ ಸಂಘಟನೆ ಮುಖಂಡರು ಮಂಗಳವಾರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ವಿನೋದ ಹತ್ತಳ್ಳಿಗೆ ಸಲ್ಲಿಸಿದರು.

ವಿಶ್ವ ಹಿಂದು ಪರಿಷತ್, ಬಜರಂಗದಳದ ಮುಖಂಡ ಗುರುಪಾದ ಕುಳಲಿ ಹಾಗೂ ಬಸವರಾಜ ಮಹಾಲಿಂಗೇಶ್ವರಮಠ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದ ಬಳಿಕ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ, ಭಯದ ವಾತಾವರಣ ಸೃಷ್ಟಿ ಮಾಡುವುದು, ಪ್ರಕರಣಗಳನ್ನು ಹಾಕುವುದು ನಡೆದುಕೊಂಡು ಬಂದಿದೆ. ಜೈನಮುನಿಗಳ ಹತ್ಯೆ ಸೇರಿ ವಿವಿಧ ಭಾಗಗಳಲ್ಲಿ ಕಾರ್ಯಕರ್ತರ ಕೊಲೆಗಳು ನಡೆದಿವೆ. ಇವುಗಳನ್ನು ತಡೆಗಟ್ಟಲು ರಾಜ್ಯಪಾಲರು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.

ಅಮೃತ ಯರಗಟ್ಟಿ, ಅಜಯ್ ಬಾಗಿ, ಬಸವರಾಜ ಬೆಳಗಲಿ, ಕಿರಣ ಸಣ್ಣಕ್ಕಿ, ಮಂಜುನಾಥ ಕುಂದರಗಿ, ಕುಮಾರ ಗಲಗಲಿ, ಸದಾಶಿವ ಬಾಗಿ, ದಶರಥ ರಜಪೂತ, ಗಂಗಾಧರ ಗೋಡೆ, ಸವಿತಾ ಅಂಗಡಿ, ದಾನಮ್ಮ ಚನ್ನಯ್ಯಗೋಳ, ಆಶಾ ಶೆಟ್ಟಿ ಇದ್ದರು. ಮಾತೃಶಕ್ತಿ ದುರ್ಗಾವಾಹಿನಿ, ಹಿಂದು ರಾಷ್ಟ್ರ ಜಾಗೃತಿ ಸಮಿತಿ ಹಾಗೂ ಹಿಂದುಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.