ವಿಜಯಪುರ: ಶಿಕ್ಷಣ ಸಂಸ್ಥೆಗಳು, ಶಾಲಾ& ಕಾಲೇಜುಗಳಲ್ಲಿ ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಕೇವಲ ಅಂಕಗಳಿಗೆ ಬೆನ್ನು ಬೀಳದೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಶಿಕ್ಷಣ ಒದಗಿಸಬೇಕೆಂದು ಜಿಲ್ಲಾ ಪತ್ರಕರ್ತರ ಸಂದ ಅಧ್ಯಕ್ಷ ಸಂಗಮೇಶ ಚೂರಿ ಹೇಳಿದರು.
ನಗರದ ವೀರಶೈವ ಲಿಂಗಾಯತ ಸಭಾ ಭವನದಲ್ಲಿ ಶನಿವಾರ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಕನಕ ಪೂರ್ವ ಪ್ರಾಥಮಿಕ ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಯಪ್ರಭು ಕೊಳಮಲಿ ಮಾತನಾಡಿ, ಎಲ್ಲ ಮಕ್ಕಳಿಗೂ ಹೈಟೆಕ್ ಶಿಕ್ಷಣ ಕೊಡುವುದೇ ನಮ್ಮ ಸಂಸ್ಥೆಯ ಗುರಿ ಉದ್ದೇಶವಾಗಿದೆ. ಪ್ರಸಕ್ತ ವರ್ಷದಲ್ಲಿ ನರ್ಸರಿ, ಎಲ್ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಸಂಸ್ಥೆಯು ಸಂಪನ್ಮೂಲ ವ್ಯಕ್ತಿಗಳನ್ನು ಒಳಗೊಂಡಿದೆ ಎಂದರು.
ಶಿಕ್ಷಣ ಸಂಯೋಜಕ ಎ.ಕೆ. ದಳವಾಯಿ, ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ, ಪಾಲಿಕೆ ಸದಸ್ಯ ರಾಜಶೇಖರ್ ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕ ಸಾಹಿತಿ ಆರ್.ಎಸ್. ಪಟ್ಟಣಶೆಟ್ಟಿ ಶಿಕ್ಷಣದ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು. ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ವಿ. ಸಿ. ನಾಗಠಾಣ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್ಎಸ್ಎಲ್ಸಿ ಪರೀೆಯಲ್ಲಿ ಶೇ. 95.70ರಷ್ಟು ಅಂಕ ಪಡೆದು ತಿಕೋಟಾ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಬಿಎಲ್ಡಿ ಸಂಸ್ಥೆಯ ಶ್ರೀ ಎ.ಬಿ. ಜತ್ತಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಐಶ್ವರ್ಯ ಹೂಗಾರ ಮತ್ತು ಸಮಾಜದ ವಿವಿಧ ೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.
ಮಧುಕರ ಜಾಧವ (ಸಾಹುಕಾರ), ವಿಠಲ ಪೂಜಾರಿ, ಗಣಪತಿ ಒಡೆಯರ, ಶಿವಾನಂದ ಹಂಜಗಿ, ಸಿದ್ದಪ್ಪ ಪೂಜಾರಿ, ಸುನಿಲ ಜೈನಾಪುರ, ಶ್ರೀಶೈಲ ಕಂಬಳಿ, ಸಂಗಮೇಶ ಕೊಳಮಲಿ ಮತ್ತಿತರರಿದ್ದರು.
ಕಾವ್ಯ ಪೂಜಾರಿ ಪ್ರಾರ್ಥಿಸಿದರು. ಸುನಿಲ್ ಜೈನಾಪುರ್ ಸ್ವಾಗತಿಸಿದರು. ಕೆ. ರಾಮು ನಿರೂಪಿಸಿದರು. ಸಂತೋಷ ಹೆಗಡೆ ವಂದಿಸಿದರು.