ಲಿಂಗಸುಗೂರಿನ ಈಶ್ವರ ದೇವಸ್ಥಾನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಉಮಾ ಮಹೇಶ್ವರಿ ಕಾಲೇಜು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಪಾಟೀಲ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಸಿ.ಪಾಟೀಲ್ ಉದ್ಘಾಟಿಸಿದರು. ಶ್ರೀ ಉಮಾ ಮಹೇಶ್ವರಿ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶರಣಬಸವ ಗಣಾಚಾರಿ, ಸಹ ಆಡಳಿತಾಧಿಕಾರಿ ಅಮರೇಶ ಸ್ವಾಮಿ, ಪ್ರಾಚಾರ್ಯ ವೀರೇಶ ಆದೋನಿ, ಸಂಯೋಜಕ ಮಸ್ತಾನ್ ಸಾಬ್, ಸ್ವರ್ಣಲತಾ ಇತರರಿದ್ದರು. 
ಜಿಲ್ಲೆ

ಮೌಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡಿ

ನರೇಶ್ ಕುಮಾರ್

ಲಿಂಗಸುಗೂರು: ವಿದ್ಯಾರ್ಥಿಗಳು ಎಂತಹ ಸಂದರ್ಭದಲ್ಲೂ ವಿಚಲಿತರಾಗದೆ ಗುರಿಯತ್ತ ಚಿತ್ತ ನೆಟ್ಟರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ಸಿಂಧನೂರಿನ ಪಾಟೀಲ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಸಿ.ಪಾಟೀಲ್ ಹೇಳಿದರು.

ಪಟ್ಟಣದ ಈಶ್ವರ ದೇವಸ್ಥಾನ ಸಭಾಂಗಣದಲ್ಲಿ ಶನಿವಾರ ಶ್ರೀ ಉಮಾ ಮಹೇಶ್ವರಿ ಪದವಿ ಪೂರ್ವ ಮತ್ತು ಮಹಿಳಾ ಪದವಿ ಮಹಾ ವಿದ್ಯಾಲಯದ ಪ್ರಥಮ ಪಿಯುಸಿ ಹಾಗೂ ಬಿ.ಎ, ಬಿ.ಕಾಂ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಉಪನ್ಯಾಸಕರು ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕು. ಮೌಲ್ಯಯುತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದರೆ ಪಾಲಕರು, ಸಮಾಜಕ್ಕೆ ಕೀರ್ತಿ ತಂದಂತಾಗುತ್ತದೆ ಎಂದರು.

ಶ್ರೀ ಉಮಾ ಮಹೇಶ್ವರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ವಿನಯಕುಮಾರ ಗಣಾಚಾರಿ ಮಾತನಾಡಿ, ಸುಸ್ಥಿರ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಬದ್ಧರಾಗಿದ್ದೇವೆ. ಸಕಾರಾತ್ಮಕ ಕಲಿಕಾ ವಾತಾವರಣ ನಿರ್ಮಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮ ಪರಿಸರಕ್ಕೆ ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕು. ದುಶ್ಚಟಗಳಿಂದ ದೂರವಿದ್ದು ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸದತ್ತ ಗಮನ ಹರಿಸಬೇಕು ಎಂದರು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕಿ ಗಂಗಮ್ಮ ಕಟ್ಟಿಮನಿ, ನಿವೃತ ಉಪನ್ಯಾಸಕ ಸೋಮಶೇಖರ ಬಳಗಾನೂರು, ಪತ್ರಕರ್ತರಾದ ಎನ್.ಬಸವರಾಜ, ವಿಶ್ವನಾಥ ಹೂಗಾರ, ಶಶಿಧರ ಕಂಚಿಮಠ, ಸುನೀಲ್ ಕುಮಾರ, ಸಿದ್ಧನಗೌಡ ಪಾಟೀಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ಉಮಾ ಮಹೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶರಣಬಸವ ಗಣಾಚಾರಿ, ಸಹ ಆಡಳಿತಾಧಿಕಾರಿ ಅಮರೇಶ ಸ್ವಾಮಿ, ಪ್ರಾಚಾರ್ಯ ವೀರೇಶ ಆದೋನಿ, ಸಂಯೋಜಕ ಮಸ್ತಾನ್ ಸಾಬ್, ಸ್ವರ್ಣಲತಾ ಉಪಸ್ಥಿತರಿದ್ದರು.