ರಟ್ಟಿಹಳ್ಳಿ: ಎನ್ನೆಸ್ಸೆಸ್ಶಿಬಿರದಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಯೋಗ, ಧ್ಯಾನ, ಶ್ರಮದಾನ, ಸಾಂಸ್ಕೃತಿಕ, ಉಪನ್ಯಾಸ ಮತ್ತು ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಈ ಶಿಬಿರದಿಂದ ವಿದ್ಯಾರ್ಥಿಗಳು ಉತ್ತಮವಾದ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ತಮ್ಮ ಜೀವನದಲ್ಲಿ ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ಮಳಗಿ ಗ್ರಾಮದಲ್ಲಿ ಪಟ್ಟಣದ ಪ್ರಿಯದರ್ಶಿನಿ ವಿದ್ಯಾಸಂಸ್ಥೆ ವತಿಯಿಂದ ಏರ್ಪಾಟಾಗಿದ್ದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.
ವಿದ್ಯಾಸಂಸ್ಥೆ ಅಧ್ಯಕ್ಷ ಡಿ.ಎಂ. ಸಾಲಿ ಮಾತನಾಡಿ, ಹೊಸತನ ಮತ್ತು ಹೊಸಜಾಗದಿಂದ ವಿದ್ಯಾರ್ಥಿಗಳು ಕಲಿತ ಪಾಠವನ್ನು ವಿದ್ಯಾರ್ಥಿಗಳು ಅನುಸರಿಸಬೇಕು. ವ್ಯಕ್ತಿತ್ವ ಮತ್ತು ಜ್ಞಾನವಿಕಾಸನಕ್ಕೆ ಶಿಬಿರಗಳು ಉಪಯುಕ್ತವಾಗುತ್ತವೆ. ವಿದ್ಯಾರ್ಥಿಗಳು ಉತ್ತಮ ನಾಯಕತ್ವ ಗುಣ ಬೆಳೆಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಬೇಕು ಎಂದರು.
ಪ್ರಾಚಾರ್ಯ ಎ.ಜಿ. ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಪಿ.ಡಿ. ಬಸನಗೌಡ್ರು, ಅಶೋಕ ಹೆಡಿಯಾಲ, ಯಾಸ್ಮಿನಬಾನು ಜೋಕನಾಳ, ಅಫ್ರೀನ್ ಉಡುಪಿ, ಶಿಬಿರಾಧಿಕಾರಿ ವಿಜಯಲಕ್ಷ್ಮೀ ರೂಳಿ, ಇತರರು ಉಪಸ್ಥಿತರಿದ್ದರು.
ಸೃಷ್ಟಿ ಮಾನೇಗಾರ, ಗೌತಮಿ ಗೌಡರ ಮತ್ತು ಭೂಮಿಕಾ ಡಿ.ಯು. ಕಾರ್ಯಕ್ರಮ ನಿರ್ವಹಿಸಿದರು.