ಕಂಪ್ಲಿಯ ಯಲ್ಲಮ್ಮಕ್ಯಾಂಪ್‌ನ ಸ್ಫೂರ್ತಿ ನವೋದಯ ತರಬೇತಿ ಶಾಲೆಯ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಶಾಸಕ ಜೆ.ಎನ್.ಗಣೇಶ್ ಸಸಿಗೆ ನೀರೆಯುವ ಮೂಲಕ ಉದ್ಘಾಟಿಸಿದರು. ಉಪ ಪ್ರಾಚಾರ್ಯೆ ಸುಜಾತ, ಮುಖ್ಯಶಿಕ್ಷಕರಾದ ಮುತ್ತಣ್ಣ ನಂದ್ಯಾಳ್, ರಮೇಶ್ ಎನ್.ಶಿವಪುರ, ಇಸಿಒಗಳಾದ ವೀರೇಶ ಇತರರಿದ್ದರು. 
ಜಿಲ್ಲೆ

ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡಿ

Gangavati - Desk - Veeresh S Ullagaddi

ಕಂಪ್ಲಿ: ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಉನ್ನತ ಹುದ್ದೆ ಪಡೆಯುವಂತೆ ಪ್ರೋತ್ಸಾಹಿಸಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.


ಪಟ್ಟಣದ ಯಲ್ಲಮ್ಮಕ್ಯಾಂಪ್‌ನ ಸ್ಫೂರ್ತಿ ನವೋದಯ ತರಬೇತಿ ಶಾಲೆಯ ಆವರಣದಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸುವ ಜತೆಗೆ ಕಲೆ, ಸಾಹಿತ್ಯಗಳ ತಿಳುವಳಿಕೆ ಮೂಡಿಸಬೇಕು. ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡುವಂತೆ ಪ್ರೇರೇಪಿಸಬೇಕು ಎಂದರು.


ಸಿಆರ್‌ಪಿ ಜಿ.ಹನುಮಂತಪ್ಪ ಮಾತನಾಡಿ, 26 ಶಾಲೆಗಳ 325ಕ್ಕೂ ಹೆಚ್ಚು ಮಕ್ಕಳು 43 ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿಭಾ ಕಾರಂಜಿ ಮಕ್ಕಳ ನವೋಲ್ಲಾಸ ಸೃಷ್ಠಿಸುವ ಜತೆಗೆ ಸ್ಪರ್ಧೆಯಲ್ಲಿ ಗೆಲ್ಲುವ ಆತ್ಮವಿಶ್ವಾಸ ಮೂಡಿಸುತ್ತದೆ ಎಂದರು.


ಷಾ.ಮಿಯಾಚಂದ್ ಪಿಯು ಕಾಲೇಜು ಉಪ ಪ್ರಾಚಾರ್ಯೆ ಸುಜಾತಾ, ಇಸಿಒ ಜಿ.ವೀರೇಶ್, ಮುಖ್ಯ ಶಿಕ್ಷಕರಾದ ಮುತ್ತಣ್ಣ ನಂದ್ಯಾಳ್, ರಮೇಶ್ ಎನ್.ಶಿವಪುರ, ಶಿಕ್ಷಕ ಸಂಘದ ಪದಾಧಿಕಾರಿಗಳಾದ ಹನುಮಂತಪ್ಪ, ಎಂ.ಎ.ನಾಗನಗೌಡ, ಎಚ್.ದೊಡ್ಡಬಸಪ್ಪ, ಸುಗ್ಗೇನಹಳ್ಳಿ ರಮೇಶ್, ಸುನಿತಾ ಪೂಜಾರಿ, ಜೋಗಿನಾಯ್ಕ ರುದ್ರಪ್ಪ, ಸಿಆರ್‌ಪಿಗಳಾದ ರೇಣುಕಾರಾಧ್ಯ, ಭೂಮೇಶ್ವರ್ ಇದ್ದರು.