ಜಿಲ್ಲೆ

ಗುಣಮಟ್ಟದ ಹಾಲಿಗೆ ಆದ್ಯತೆ ನೀಡಿ

ತುಮಕೂರು ಡೆಸ್ಕ್

ಎಂ.ಎನ್​.ಕೋಟೆ: ರೈತರು ಗುಣಮಟ್ಟದ ಹಾಲನ್ನು ಹಾಕವ ಮೂಲಕ ಡೇರಿಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹೊರಬೇಕು ಎಂದು ತುಮುಲ್​ ನಿರ್ದೇಶಕಿ ಭಾರತಿ ಶ್ರೀನಿವಾಸ್​ ತಿಳಿಸಿದರು.

ಗುಬ್ಬಿ ತಾಲೂಕಿನ ಅದಲಗೆರೆಯಲ್ಲಿ ಗುರುವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಮೂರು ವರ್ಷದಲ್ಲಿ ನೂರು ಡೇರಿ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ರೈತರು ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು. ಪ್ರತಿಯೊಬ್ಬ ರೈತರೂ ಹಸುಗಳನ್ನು ಸಾಕಿ ಡೇರಿಗಳಿಗೆ ಹಾಲು ಹಾಕಿದರೆ ಜೀವನ ಸಾಗಿಸಲು ಅನುಕೂಲವಾಗುತ್ತದೆ. ಈಗಾಗಲೇ ಗ್ರಾಮೀಣ ಭಾಗದಲ್ಲಿ ಪ್ರತಿ ಡೇರಿಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಅಲಿಸಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದಿಂದ ಬರುವ ಸೌಲಭ್ಯವನ್ನು ಪ್ರಾಮಾಣಿಕವಾಗಿ ರೈತರಿಗೆ ತಲುಪಿಸಲು ಪ್ರಯತ್ನ ಮಾಡಲಾಗುವುದು ಎಂದರು.