ಹಟ್ಟಿಚಿನ್ನದಗಣಿಯಲ್ಲಿ ಗಣಿ ಕಂಪನಿ ಅಧ್ಯಕ್ಷ ಜೆ.ಟಿ.ಪಾಟೀಲ್‌ಗೆ ಕಾರ್ಮಿಕ ಮುಖಂಡರು ಮನವಿ ಸಲ್ಲಿಸಿದರು. ಮುಖಂಡರಾದ ತಿಪ್ಪಣ್ಣ ಮಾಚನೂರು, ಹಾಜಿಬಾಬು, ಪೆಂಚಲಮ್ಮ, ಕುಪ್ಪಣ್ಣ ತಲೆಹೂಡಕರ, ಗಂಗಪ್ಪ, ಗುರುರಾಜ, ಅಮರೇಶ ಇತರರಿದ್ದರು. 
ಜಿಲ್ಲೆ

ಸಿಎಂ ಕಾರ್ಯಕ್ರಮಕ್ಕೆ ವೇತನ ಸಹಿತ ರಜೆ ನೀಡಿ

ನರೇಶ್ ಕುಮಾರ್

ಹಟ್ಟಿಚಿನ್ನದಗಣಿ: ಹಟ್ಟಿಚಿನ್ನದಗಣಿ ಸಿಬ್ಬಂದಿ ಹಾಗೂ ಕಾರ್ಮಿಕರ ಹೊಸ ವಸತಿ ಸಮುಚ್ಚಯ ನಿರ್ಮಾಣದ ಶಂಕುಸ್ಥಾಪನೆ ದಿನ ಗಣಿ ಕಂಪನಿ ನೌಕರರಿಗೆ ವೇತನ ಸಹಿತ ರಜೆ ನೀಡಬೇಕೆಂದು ಕಾರ್ಮಿಕ ಮುಖಂಡರು ಮಂಗಳವಾರ ಕಂಪನಿ ಅಧ್ಯಕ್ಷ, ಬೀಳಗಿ ಶಾಸಕ ಜೆ.ಟಿ. ಪಾಟೀಲ್‌ಗೆ ಮನವಿ ಸಲ್ಲಿಸಿದರು.

ಸಿಎಂ ಸಿದ್ದರಾಮಯ್ಯ ಆ.6ರಂದು ಹಟ್ಟಿಚಿನ್ನದ ಗಣಿ ಕಂಪನಿ ಕಾರ್ಯಕ್ರಮಕ್ಕೆ ಆಗಮಿಸುವುದರಿಂದ ಅಂದು ಒಂದು ದಿನದ ವೇತನ ಸಹಿತ ರಜೆ ಘೊಷಣೆ ಮಾಡಬೇಕು. ಕಾರ್ಮಿಕರಿಗೆ ಕಂಪನಿಯಿಂದ ಉಡುಗೊರೆ ನೀಡಬೇಕೆಂದು ಮನವಿ ಮಾಡಿದರು.

ಮುಖಂಡರಾದ ತಿಪ್ಪಣ್ಣ ಮಾಚನೂರು, ಹಾಜಿಬಾಬು, ಪೆಂಚಲಮ್ಮ, ಕುಪ್ಪಣ್ಣ ತಲೆಹೂಡಕರ, ಗಂಗಪ್ಪ, ಮೌನೇಶ, ಗುರುರಾಜ, ಅಮರೇಶ, ಎಂ.ಡಿ ಮುನ್ನಿರುದ್ದೀನ್, ಗ್ಯಾನಪ್ಪ, ಹನುಮಂತರಾಯ, ಉಮಾಪತಿ ಇತರರಿದ್ದರು.