ಸಾಲಿಗ್ರಾಮ ತಾಲೂಕು ಎಸ್‌ಟಿ ಘಟಕದ ಕಾಂಗ್ರೆಸ್ ಅಧ್ಯಕ್ಷ ಮಹದೇವನಾಯಕ ಮತ್ತು ಮುಖಂಡರು ಸಹಕಾರ ಸಚಿವ ಕೆ ರಾಜಣ್ಣ ಅವರನ್ನು ಹಾಸನದಲ್ಲಿ ಮಂಗಳವಾರ ಭೇಟಿ ಮಾಡಿ ಅನುದಾನ ನೀಡುವಂತೆ ಮನವಿ ಮಾಡಿದರು. 
ಜಿಲ್ಲೆ

ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿ

ಎಂ.ರವಿ

ಸಾಲಿಗ್ರಾಮ: ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುವಂತೆ ಸಹಕಾರ ಸಚಿವ ಎನ್.ರಾಜಣ್ಣ ಅವರನ್ನು ತಾಲೂಕು ಕಾಂಗ್ರೆಸ್ ಎಸ್‌ಟಿ ಘಟಕದ ಅಧ್ಯಕ್ಷ ಮಹದೇವನಾಯಕ ಹಾಸನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಸಾಲಿಗ್ರಾಮ ತಾಲೂಕು ನೂತನವಾಗಿ ಪ್ರಾರಂಭಗೊಂಡಿರುವುದರಿಂದ ನಾಯಕ ಸಮಾಜ ಅಭಿವೃದ್ಧಿ ಆಗಬೇಕಿದೆ. ಹಾಗಾಗಿ ಸಾಲಿಗ್ರಾಮ ತಾಲೂಕು ವಾಲ್ಮೀಕಿ ಭವನ ನಿರ್ಮಾಣ ಮಾಡಲು ಶಾಸಕ ಡಿ.ರವಿಶಂಕರ್ ಒಂದು ಕೋಟಿ ರೂ. ಅನುದಾನ ಕೊಡಿಸುವ ಭರವಸೆ ನೀಡಿದ್ದಾರೆ. ಅದು ವಿಳಂಬವಾಗುವಾದ ರೀತಿಯಲ್ಲಿ ಶಾಸಕರೊಂದಿಗೆ ಸರ್ಕಾರಕ್ಕೆ ಹೆಚ್ಚಿನ ಒತ್ತಡ ಹಾಕಿ. ನೀವೂ ಅನುದಾನದ ಜತೆಗೆ ಸಂಘದ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದರು.

ತಿಪ್ಪೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ವಿಶೇಷ ಅನುದಾನವನ್ನು ನೀಡುವ ಮೂಲಕ ಈ ಭಾಗದ ರೈತರ ಅಭಿವೃದ್ಧಿಗೆ ಸಹಕರಿಸಿ. ತಾಲೂಕಿನ ಶಾಸಕರಿಗೆ ಇನ್ನಷ್ಟು ಶಕ್ತಿ ತುಂಬುವ ಮೂಲಕ ವಿಧಾನಸಭಾ ಕ್ಷೇತ್ರದಲ್ಲಿ ಇರುವ ನಾಯಕ ಸಮಾಜದ ಗ್ರಾಮಗಳಲ್ಲಿ ವಾಲ್ಮೀಕಿ ಭವನಗಳನ್ನು ನಿರ್ಮಾಣ ಮಾಡಲು ಸರ್ಕಾರದಿಂದ ಹೆಚ್ಚಿನ ಅನುದಾನ ಕೊಡಿಸಿ. ಈಗಾಗಲೇ ಶಾಸಕ ಡಿ.ರವಿಶಂಕರ್ ಅವರು ವಾಲ್ಮೀಕಿ ಭವನಗಳಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ನಿಮ್ಮ ಸಹಕಾರವು ಇರಲಿ ಎಂದರು.

ಸಾಲಿಗ್ರಾಮದ ವಾಲ್ಮೀಕಿ ಭವನ ನಿರ್ಮಾಣಕ್ಕೆ ಪ್ರಮುಖ ಪಾತ್ರ ವಹಿಸಿ ಹೆಚ್ಚಿನ ಸಹಕಾರ ನೀಡುವುದರ ಜತೆಗೆ ಸಮಾಜದ ಕುಂದು ಕೊರತೆಗಳಿಗೆ ಸ್ಪಂದಿಸಿ ನಿಮ್ಮೆಲ್ಲರ ಸಹಕಾರದಿಂದ ಸಮಾಜದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕೆಲಸವನ್ನು ಸಾಲಿಗ್ರಾಮ ತಾಲೂಕು ನಾಯಕರ ಸಂಘ ಮಾಡಲು ಮುಂದಾಗಿದೆ. ಅವರಿಗೆ ಶಕ್ತಿ ತುಂಬವ ಕೆಲಸ ನೀವು ಮಾಡಿ ಎಂದು ಮನವಿ ಮಾಡಿದರು.

ಈ ವೇಳೆ ಮುಖಂಡರಾದ ವಿಷ್ಣು, ದೊರೆಸ್ವಾಮಿ, ಕೃಷ್ಣನಾಯಕ, ರಾಜೇಗೌಡ, ಮಾದೇವನಾಯಕ ಇತರರು ಇದ್ದರು.