ಮಾನ್ವಿಯಲ್ಲಿ ಅಖಿಲ ಭಾರತ ಕಿಸಾನ್ ಸಂಘಟನೆ ತಾಲೂಕು ಘಟಕದಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್‌ಗೆ ಮನವಿ ಸಲ್ಲಿಸಲಾಯಿತು. ತಾಲೂಕು ಘಟಕದ ಅಧ್ಯಕ್ಷ ಮುದುಕಪ್ಪ ನಾಯಕ, ತಾಲೂಕು ಉಪಾಧ್ಯಕ್ಷ ಆನಂದ ಭೋವಿ, ಪ್ರಮುಖರಾದ ಅಮರೇಶ ಚೀಕಲಪರ್ವಿ, ಯಲ್ಲಪ್ಪನಾಯಕ ಕುರ್ಡಿ, ಆಂಜನೇಯ ಬಲ್ಲಟಗಿ, ದೀಲಿಪ್ ಟೈಲರ್ ಇತರರಿದ್ದರು. 
ಜಿಲ್ಲೆ

ಸಾಗುವಳಿದಾರರಿಗೆ ಭೂಮಿ ಪಟ್ಟಾ ನೀಡಿ

ಗಾಯತ್ರಿ ಮಾಲಿಪಾಟೀಲ್

ಮಾನ್ವಿ: ಹಲವು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿರುವವರಿಗೆ ಭೂಮಿಯನ್ನು ಹಂಚಿಕೆ ಮಾಡಿ ಹಕ್ಕುಪತ್ರಗಳನ್ನು ಸಾಗುವಳಿದಾರರಿಗೆ ಭೂಮಿ ಪಟ್ಟಾ ನೀಡುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಂಘಟನೆಯಿಂದ ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ತಾಲೂಕು ಘಟಕದ ಅಧ್ಯಕ್ಷ ಮುದುಕಪ್ಪ ನಾಯಕ ಮಾತನಾಡಿ, ಸರ್ವೇ ನಂ.54ರಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು. ತಾಲೂಕಿನ ಕುರ್ಡಿ, ಕಂಬಳತ್ತಿ, ಜಾಗೀರಪನ್ನೂರು, ಮದ್ಲಾಪೂರು ಹಾಗೂ ದದ್ದಲ ಸೇರಿ ವಿವಿಧ ಗ್ರಾಮಗಳ ಭೂರಹಿತ ಬಡವರು ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಯಲ್ಲಿ ಶೀಘ್ರದಲ್ಲಿ ಪಂಚನಾಮೆ ನಡೆಸಿ ಪಟ್ಟಾ ನೋಂದಣಿ ಮಾಡಿಸಬೇಕು. ಸಿರವಾರ ತಾಲೂಕಿನ ಕೆ.ಗುಡದಿನ್ನಿ, ಗಣದಿನ್ನಿ, ಬಲ್ಲಟಗಿ ಗ್ರಾಮದ ಭೂರಹಿತರು ಸಾಗುವಳಿ ಮಾಡುತ್ತಿದ್ದಾರೆ. ಹಳ್ಳಿ ಗ್ರಾಮ, ಲಕ್ಕಮದಿನ್ನಿ ಹಾಗೂ ಇತರೆ ಗ್ರಾಮಗಳ ಭೂಹೀನರು ಸಾಗುವಳಿ ಮಾಡುತ್ತಿರುವ ಸರ್ಕಾರಿ ಭೂಮಿಗೆ ಪಟ್ಟಾ ನೀಡಬೇಕು ಎಂದು ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್‌ಗೆ ಮನವಿ ಸಲ್ಲಿಸಿದರು.