ಗುಳೇದಗುಡ್ಡ ಪಟ್ಟಣದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ನೀಡುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಯುವ ಮೋರ್ಚಾ ಅಧ್ಯಕ್ಷ ರಾಜು ಗೌಡರ, ರವಿ ಅಂಗಡಿ, ಸಂಜೀವ ಕಾರಕೂನ, ಮುತ್ತು ಚಿಕ್ಕನರಗುಂದ, ಹಿರಿಯಪ್ಪ ಮಾದರ, ರಾಜು ಚಿತ್ತರಗಿ ಇತರರಿದ್ದರು. 
ಜಿಲ್ಲೆ

ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ನೀಡಿ

ಗುಳೇದಗುಡ್ಡ: ತಾಲೂಕು ಕೇಂದ್ರವಾಗಿರುವ ಗುಳೇದಗುಡ್ಡ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಿಸಲು ಜಾಗ ನೀಡುವಂತೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ತಹಸೀಲ್ದಾರ್ ಮಂಗಳಾ ಎಂ.ಅವರಿಗೆ ಮನವಿ ಸಲ್ಲಿಸಲಾಯಿತು.

ಮಾಜಿ ಶಾಸಕ ರಾಜಶೇಖರ ಶೀಲವಂತ, ಗುಳೇದಗುಡ್ಡ ಪಟ್ಟಣವು ತಾಲೂಕು ಕೇಂದ್ರವಾಗಿದ್ದು, ಆದರೆ, ಇಲ್ಲಿನ ಕ್ರೀಡಾಪಟುಗಳಿಗೆ ಆಟವಾಡಲು ಸೂಕ್ತ ಮೈದಾನವಿಲ್ಲ. ಶಾಲೆ, ಕಾಲೇಜು, ಖಾಸಗಿ ಹೊಲಗಳಲ್ಲಿ ಆಟ ಆಡುತ್ತಿದ್ದಾರೆ.

ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯದೊಂದಿಗೆ ಸುಸಜ್ಜಿತ ಕ್ರೀಡಾಂಗಣ ಇಲ್ಲವಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗ ಒದಗಿಸಬೇಕೆಂದು ಒತ್ತಾಯಿಸಿದರು.

ಯುವಮೋರ್ಚಾ ಅಧ್ಯಕ್ಷ ರಾಜು ಗೌಡರ, ರವಿ ಅಂಗಡಿ, ಸಂಜೀವ ಕಾರಕೂನ, ಮುತ್ತು ಚಿಕ್ಕನರಗುಂದ, ಹಿರಿಯಪ್ಪ ಮಾದರ, ರಾಜು ಚಿತ್ತರಗಿ, ರಾಮಕೃಷ್ಣ ಮಿಣಜಗಿ, ಸಾಗರ ಹಾನಾಪೂರ, ಹನುಮಂತ ಆಲಗುಂಡಿ, ಪರಶು ಧನ್ನೂರ, ನವೀನ ಉಗಲವಾಟ, ರವಿ ಬಂಕಾಪೂರ, ಮಂಜು ಹಲಕುರ್ಕಿ, ಪರಶು ಸುಳಿಭಾವಿ, ಶಿವು ತುಪ್ಪದ, ರವಿ ಚುಂಗಿನ, ಪರಶುರಾಮ ಸಂಗೊಂದಿ, ಗಿರೀಶ ಮ್ಯಾಗೇರಿ, ವೆಂಕಟೇಶ ಜಾಧವ, ಶಿವಾನಂದ ಬಾದವಾಡಗಿ, ಸಂಗಮೇಶ ಸಾಳಗುಂದಿ, ಅಭಿಷೇಕ ಅಲದಿ, ವಿಠ್ಠಲ ಸೂಳಿಕೇರಿ ಇತರರಿದ್ದರು.