ಕಂಪ್ಲಿ: ಕಣ್ಣಿನ ಆರೋಗ್ಯಕ್ಕೆ ಪೋಷಕಾಂಶವುಳ್ಳ ಸಮತೋಲನ ಆಹಾರ ಸೇವಿಸಬೇಕು ಎಂದು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಕಣ್ಣು ಪರೀಕ್ಷಕ ಪ್ರಕಾಶ್ ಮಾಲಿಪಾಟೀಲ್ ಹೇಳಿದರು.
ಪಟ್ಟಣದ ಜೆಸಿಐ ಕಂಪ್ಲಿ ಸೋನಾ ಸಂಸ್ಥೆಯಿಂದ, ಇಲ್ಲಿನ ಮದರ್ ತೆರೇಸಾ ಮಹಿಳಾ ಪ.ಪೂ.ಕಾಲೇಜಿನಲ್ಲಿ, ಕಣ್ಣಿನ ಸಂರಕ್ಷಣೆ ಮತ್ತು ಆರೋಗ್ಯ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದನ್ನೂ ಓದಿ: ಸರ್ಕಾರಿ ಶಾಲೆ ಗೋಡೆ ಕುಸಿತ ; ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರು
ಕಣ್ಣಿನ ಆರೋಗ್ಯ ಮತ್ತು ಸಂರಕ್ಷಣೆ ಕುರಿತು ಸೂಕ್ತ ಸಲಹೆ, ಸೂಚನೆಗಳನ್ನು ನೀಡಿ ಕಣ್ಣಿನ ಆರೈಕೆಗೆ ಪ್ರಾಮುಖ್ಯತೆ ನೀಡಬೇಕು ಎಂದರು.
ತಹಸೀಲ್ದಾರ್ ಗೌಸಿಯಾಬೇಗಮ್ ಮಾತನಾಡಿ, ಕಣ್ಣಿನ ಆರೋಗ್ಯ ಕುರಿತು ವಿದ್ಯಾರ್ಥಿಗಳು ಜಾಗೃತಿವಹಿಸಬೇಕು. ನಿತ್ಯ ವ್ಯಾಯಾಮ ಅಂಗಸಾಧನೆಯಲ್ಲಿ ಕಣ್ಣಿನ ಆರೋಗ್ಯ ಸಂಬಂಧಿಸಿದ ಪೂರಕ ವ್ಯಾಯಾಮಕ್ಕೂ ಆದ್ಯತೆ ನೀಡಬೇಕು ಎಂದರು.
ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಸಂತೋಷ್ ಕೊಟ್ರಪ್ಪ ಸೋಗಿ, ಮಹಿಳಾ ವಿಭಾಗದ ಅಧ್ಯಕ್ಷೆ ಅಮೃತಾ ಸಂತೋಷ್, ನಿರ್ದೇಶಕಿ ಸುಮನ್ ಪದ್ಮಶಾಲಿ, ಕಾರ್ಯದರ್ಶಿ ಬಿ.ಎಚ್.ಎಂ.ಅಮರನಾಥಶಾಸ್ತ್ರಿ, ಕಾಲೇಜು ಉಪನ್ಯಾಸಕ ಮಹಾಬಲೇಶ್ವರಪ್ಪ ಇತರರಿದ್ದರು.