ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಪ್ರರು ತಮ್ಮ ಬ್ರಾಹ್ಮಣ್ಯದ ಕರ್ತವ್ಯಗಳಿಂದ ವಿಮುಖರಾಗದೆ ವಿದ್ಯೆಗೆ ಹೆಚ್ಚಿನ ಗಮನ ಹರಿಸಿದರೆ ಲಕ್ಷ್ಮಿಯು ತಾನಾಗಿನೇ ಒಲಿಯುತ್ತಾಳೆ ಎಂದು ಕಾನೂನು ವಿವಿ ಸಿಂಡಿಕೇಟ್ ಸದಸ್ಯ ಎಸ್.ಎನ್.ಪರಾಂಡೆ ಹೇಳಿದರು.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿಪ್ರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ 15ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ವೆಂಕಟೇಶ ದೇಸಾಯಿ ಮಾತಾನಾಡಿ, ತಮ್ಮ 10 ವರ್ಷದ ಕಾರ್ಯ ಅವಧಿಯಲ್ಲಿ ವಿಪ್ರ ಸೌಹಾರ್ದ ಸಂಘ ಸಾಧಿಸಿದ ಪ್ರಗತಿ ಮಾಹಿತಿ ನೀಡಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಾಧವ ಶೂರ್ಪಾಲಿ, ಉಪಾಧ್ಯಕ್ಷ ಆನಂದ ಸಬನೀಸ್, ನಿರ್ದೇಶಕರಾದ ಅರವಿಂದ ಕುಲಕರ್ಣಿ, ಮಾಧವ ಧಾರವಾಡಕರ, ಅರವಿಂದ ಕಟ್ಟಿ, ನವೀನ ಕೊರ್ಲಹಳ್ಳಿ, ವಿನಾಯಕ ಜೋಶಿ, ಶೋಭಾ ದೇಶಪಾಂಡೆ, ಶಾಂತಾ ಕುಲಕರ್ಣಿ ಅವರನ್ನು ಸಭೆಗೆ ಪರಿಚಯಿಸಲಾಯಿತು.
ಮುಖ್ಯ ಕಾರ್ಯ ನಿರ್ವಾಹಕಿ ಸಂಗೀತಾ ಕುಲಕರ್ಣಿ, ವಸಂತ ಪಾಟೀಲ, ರಾಜೀವ ಪಾಟೀಲಕುಲಕರ್ಣಿ, ನವೀನಶಾಸ್ತ್ರಿ ಪುರಾಣಿಕ, ವಿ.ಬಿ. ದೇಶಪಾಂಡೆ, ಪ್ರೊ. ದೀಪಕ ಆಲೂರ, ಶ್ರೀಕಾಂತ ದೇಸಾಯಿ, ಗೋಪಿನಾಥ ದೇಶಪಾಂಡೆ, ರಮೇಶ ಪರ್ವತಿಕರ, ಪ್ರಭಾಕರ ಗದರೆ, ವಿಜಯಾ ದೇಸಾಯಿ, ಶ್ರುತಿ ಕುಲಕರ್ಣಿ, ಇಂದು ದೇಶಪಾಂಡೆ, ಇತರರು ಇದ್ದರು.
ಆರ್.ಡಿ. ಕುಲಕರ್ಣಿ ಸ್ವಾಗತಿಸಿದರು. ಅರವಿಂದ ಕಟ್ಟಿ ನಿರೂಪಿಸಿದರು. ಶೋಭಾ ದೇಶಪಾಂಡೆ ವಂದಿಸಿದರು.