ಗಂಗಾವತಿ: ಅಂಗನವಾಡಿ ಕೇಂದ್ರಗಳು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಶಾಲಾ ಪೂರ್ವ ಶಿಕ್ಷಣ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಪರಶುರಾಂ ವೈ.ಸೆಟ್ಟೆಪ್ಪನವರ್ ಹೇಳಿದರು.
ಇದನ್ನೂ ಓದಿ: ಬಾಂಜಾರುಮಲೆಯಲ್ಲಿ ತೆರೆಯಿತು ಅಂಗನವಾಡಿ : ದುರ್ಗಮ ಪ್ರದೇಶದಲ್ಲಿ ಹಲವಾರು ವರ್ಷದ ಬೇಡಿಕೆ ಕೊನೆಗೂ ಈಡೇರಿಕೆ
ತಾಲೂಕಿನ ಮುಕ್ಕಂಪಿಯ ಬಯಲು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಕಲಿಕೆ ಟಾಟಾ ಟ್ರಸ್ಟ್ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಬಾಲಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಾಲಕರು ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಬೇಕಿದ್ದು, ಕಲಿಕೆ ಜತೆಗೆ ಆರೋಗ್ಯ ಕಾಳಜಿವಹಿಸಲಾಗುತ್ತಿದೆ. ಮಕ್ಕಳ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಅಗತ್ಯವಿದೆ. ಚಟುವಟಿಕೆಗಳೊಂದಿಗೆ ಶಿಕ್ಷಣ ನೀಡುವುದರಿಂದ ಮಕ್ಕಳ ಕಲಿಕೆ ಸುಲಭವಾಗುವುದು. ಪ್ರತಿಯೊಂದು ಅಂಗನವಾಡಿಗಳಿಗೆ ಸ್ಮಾರ್ಟ್ ಟಿವಿಗಳಿದ್ದು, ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಸ್ಥಳೀಯರ ಸಹಕಾರದೊಂದಿಗೆ ಕೇಂದ್ರಗಳ ಗುಣಮಟ್ಟ ಹೆಚ್ಚಿಸಲಾಗುತ್ತಿದೆ ಎಂದರು.
ಅಂಗನವಾಡಿ ಕೇಂದ್ರದ ಕಲಿಕೆ, ಗುಣಮಟ್ಟ ಮತ್ತು ಮಕ್ಕಳ ಆರೈಕೆ ಕುರಿತು ಸಿಡಿಪಿಒ ಜಯಶ್ರೀ ರಾಜಪುರೋಹಿತ್ ಮಾಹಿತಿ ನೀಡಿದರು. ಇಲಾಖೆ ನಿರೂಪಣಾಧಿಕಾರಿ ಎ.ಗಂಗಪ್ಪ, ಎಸಿಡಿಪಿಒ ಪ್ರಸನ್ನಕುಮಾರ, ಪ್ರಮುಖರಾದ ಹನುಮಂತಪ್ಪ ತಳವಾರ, ಮಂಜಪ್ಪ ಬಾಲಗೊಂಡರ್, ವಿರೂಪಾಕ್ಷಗೌಡ ಪಾಟೀಲ್, ರಂಗನಗೌಡ, ಮದ್ದಾನೆಪ್ಪ ಬೋವಿ, ಗಂಗಪ್ಪ ಇತರರಿದ್ದರು.