ನೇಕಾರ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು. ಒಕ್ಕೂಟದ ಅಧ್ಯಕ್ಷ ಜಿ.ನಾಗರಾಜ, ಪದಾಕಾರಿಗಳಾದ ಬಂಡೇಶ ವಲ್ಕಂದಿನ್ನಿ, ಎಚ್.ವೆಂಕಟೇಶ, ಈರಣ್ಣ ಕರ್ಲಿ, ಉದಯಕುಮಾರ, ಪಿ.ಗೋವಿಂದರಾಜು, ವಿನಯ, ವಿಜಯಭಾಸ್ಕರ್ ಇಟಗಿ, ದತ್ತಾತ್ರೇಯ ವಲ್ಕಂದಿನ್ನಿ ಇದ್ದರು. 
ಜಿಲ್ಲೆ

ನೇಕಾರ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಿ

ರಾಯಚೂರು: ಹಿಂದಿನ ಸರ್ಕಾರದ ಅವಯಲ್ಲಿ ಘೋಷಣೆ ಮಾಡಲಾಗಿದ್ದ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಅಭಿವೃದ್ಧಿ ನಿಗಮವನ್ನು ಪ್ರಾರಂಭಿಸಿ ಕನಿಷ್ಠ 100 ಕೋಟಿ ರೂ. ಅನುದಾನ ನೀಡುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಪ್ರಸಕ್ತ ಸಾಲಿನ ನಿಗಮಕ್ಕೆ ಅನುದಾನ ನೀಡುವ ಆಶಾಭಾವವಿತ್ತು. ಆದರೆ ಸಿಎಂ ಸಿದ್ಧರಾಮಯ್ಯ ಅನುದಾನ ನೀಡದೆ ನಿರ್ಲಕ್ಷ ವಹಿಸಿದ್ದಾರೆ ಎಂದು ದೂರಿದರು.
ರಾಜ್ಯಲದಲಿ ಸುಮಾರು 80 ಲಕ್ಷಕ್ಕೂ ಹೆಚ್ಚು ನೇಕಾರ ಸಮುದಾಯದ ಅಭಿವೃದ್ಧಿಗಾಗಿ ಅಭಿವೃದ್ಧಿ ನಿಗಮ ಘೋಷಣೆ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದು 10 ತಿಂಗಳು ಪೂರ್ಣಗೊಂಡ ನಂತರವೂ ನಿಗಮದ ಕಚೇರಿ ಆರಂಭಕ್ಕೆ ಕ್ರಮ ಕೈಗೊಂಡಿಲ್ಲ. ಜತೆಗೆ ಅನುದಾನವನ್ನು ನೀಡಿಲ್ಲ.
ನೇಕಾರರು ಆರ್ಥಿಕವಾಗಿ, ಸಾಮಾಜಿಕವಾಗಿ, ಔದ್ಯೋಗಿಕವಾಗಿ, ರಾಜಕೀಯವಾಗಿ ಅತಂತ್ರ ಸ್ಥಿತಿಯಲ್ಲಿದ್ದು, ಮುಖ್ಯಮಂತ್ರಿಗಳು ಕೂಡಲೇ ನಿಗಮಕ್ಕೆ 100 ಕೋಟಿ ರೂ. ಅನುದಾನ ನೀಡುವುದರ ಜತೆಗೆ ಕಚೇರಿ ಆರಂಭಕ್ಕೆ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ಜಿ.ನಾಗರಾಜ, ಪದಾಕಾರಿಗಳಾದ ಬಂಡೇಶ ವಲ್ಕಂದಿನ್ನಿ, ಎಚ್.ವೆಂಕಟೇಶ, ಈರಣ್ಣ ಕರ್ಲಿ, ಉದಯಕುಮಾರ, ಪಿ.ಗೋವಿಂದರಾಜು, ವಿನಯ, ವಿಜಯಭಾಸ್ಕರ್ ಇಟಗಿ, ದತ್ತಾತ್ರೇಯ ವಲ್ಕಂದಿನ್ನಿ, ವೀರೇಂದ್ರ ಕಿಲಕಿಲೆ, ಅಶೋಕಕುಮಾರ ಜಿಂದೆ ಪಾಲ್ಗೊಂಡಿದ್ದರು.