ಗುಳೇದಗುಡ್ಡ: ಸಾಮಾನ್ಯ ಮಕ್ಕಳಂತೆ ಅಂಗವಿಕಲ ಮಕ್ಕಳಿಗೂ ಸಮಾನ ಅವಕಾಶಗಳನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಸರ್ಕಾರಿ ಬಾಲಕರ ಪಪೂ ಕಾಲೇಜಿನ ಉಪಪ್ರಾಚಾರ್ಯ ಎಂ.ಸಿ. ಮುದಕವಿ ಹೇಳಿದರು.
ಪಟ್ಟಣದ ಮಾರ್ಕೆಟ್ ಹತ್ತಿರ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಮನ್ವಯಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಸಮನ್ವಯ ಶಿಕ್ಷಣ ಕಾರ್ಯಕ್ರಮದಡಿ ಗುರುವಾರ ಹಮ್ಮಿಕೊಂಡಿದ್ದ ಪಾಲಕರು, ಪೋಷಕರು, ಸಾರ್ವಜನಿಕರಿಗೆ ಅರಿವು ಜಾಗೃತಿ ಹಾಗೂ ಬೀದಿ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಾಲಕರು ತಮ್ಮ ಮಕ್ಕಳಿಗೆ ಮನೋಸ್ಥೈರ್ಯ ತುಂಬುವ ಜತೆಗೆ ಪ್ರೋತ್ಸಾಹ ನೀಡಬೇಕು ಎಂದರು.
ಕೆರೂರ ನಗರದ ಶಾಕಾಂಬರಿ ಜಾನಪದ ಕಲಾ ತಂಡದಿಂದ ಬೀದಿನಾಟಕ ಪ್ರದರ್ಶಿಸಲಾಯಿತು.
ಸಾರ್ವಜನಿಕರಿಗೆ ಸಮನ್ವಯ ಶಿಕ್ಷಣ ಕರಪತ್ರ ವಿತರಿಸಲಾಯಿತು.
ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಎಸ್.ಎಸ್. ಚೌಕದ, ಎಚ್.ಆರ್. ಕಡಿವಾಲ, ವಿ.ಎಚ್. ಮಡಿವಾಳರ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಜಗದೀಶ ಬುಳ್ಳಾ, ಭಾಗೀರಥಿ ಆಲೂರ, ಮುಖ್ಯಶಿಕ್ಷಕ ಎಲ್.ಎಂ. ಹುಬ್ಬಳ್ಳಿ ಇತರರಿದ್ದರು.