ದೇವದುರ್ಗದ ಬಾಬು ಜಗಜೀವನರಾಮ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರವಣ ನೂನ್ಯತೆಯುಳ್ಳ ವ್ಯಕ್ತಿಗಳ ದಿನಾಚರಣೆ ಕಾರ್ಯಕ್ರಮವನ್ನು ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ ಉದ್ಘಾಟಿಸಿದರು. ಸಮೂಹ ಸಂಸ್ಥೆ ಉಪನಿರ್ದೇಶಕ ಎಸ್.ಎಸ್.ಘಂಟಿ, ವಕೀಲ ಬಸನಗೌಡ ದೇಸಾಯಿ, ಎಸಿಡಿಪಿಒ ನಾಗರಾಜ, ವೆಂಕೋಬ ನಾಯಕ, ಡಾಕೋಜಿ ಇದ್ದರು.\  
ಜಿಲ್ಲೆ

ಅಂಗವಿಕಲ ಮಕ್ಕಳಿಗೆ ಅವಕಾಶ ನೀಡಿ

ದೇವದುರ್ಗ: ಅಂಗವಿಕಲ ಮಕ್ಕಳಿಗೆ ಅನುಕಂಪ ತೋರಿಸದೆ ಸಮಾನ ಅವಕಾಶ ನೀಡಬೇಕು ಎಂದು ವಕೀಲ ಬಸನಗೌಡ ದೇಸಾಯಿ ಹೇಳಿದರು.


ಪಟ್ಟಣದ ಬಾಬು ಜಗಜೀವನರಾಮ್ ಭವನದಲ್ಲಿ ಸಮೂಹ ಸಾಮರ್ಥ್ಯ ಸಂಸ್ಥೆ ಮತ್ತು ಪ್ರತಿಧ್ವನಿ ಅಂಗವಿಕಲರ ಅಭಿವೃದ್ಧಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಶ್ರವಣ ನೂನ್ಯತೆಯುಳ್ಳ ವ್ಯಕ್ತಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.


ಶ್ರವಣ ನೂನ್ಯತೆಯುಳ್ಳ ಮಕ್ಕಳಿಂದ ಏನು ಮಾಡಲಾಗದು ಎನ್ನುವ ಭಾವನೆ ಇರಬಾರದು. ಅವರಿಗೆ ಸೂಕ್ತ ತರಬೇತಿ ನೀಡಿ ಸ್ವಾಲಂಭಿಗಳಾಗಿ ಬದುಕಲು ಅವಕಾಶ ನೀಡಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.


ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ ಮಾತನಾಡಿ, ಅಂಗವಿಕಲರಿಗಾಗಿ ಪುರಸಭೆಯಲ್ಲಿ ಮೀಸಲಿಟ್ಟ ಅನುದಾನದಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲಾಗುವುದು. ಅಂಗವಿಕಲ ಮಕ್ಕಳಿಗೆ ಅವಕಾಶ ನೀಡುವ ಮೂಲಕ ಅವರ ಕೌಶಲ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದರು.


ಸಮೂಹ ಸಂಸ್ಥೆ ಉಪನಿರ್ದೇಶಕ ಎಸ್.ಎಸ್.ಘಂಟಿ ಮಾತನಾಡಿದರು. ಸಹಾಯಕ ನಿರ್ದೇಶಕ ನಾಗರಾಜ, ಮೇಲ್ವಿಚಾರಕಿ ಗಂಗಮ್ಮ, ಗ್ರಾಮೀಣ ತಾಲೂಕು ಪುನರ್ವಸತಿ ಕಾರ್ಯಕರ್ತ ಲೋಕಪ್ಪ ಜಾದವ್, ಅಂಗವಿಕಲರ ಪಾಲಕರ ಒಕ್ಕೂಟದ ಅಧ್ಯಕ್ಷ ವೆಂಕೋಬ ನಾಯಕ, ಪ್ರತಿಧ್ವನಿ ಸಂಸ್ಥೆ ಅಧ್ಯಕ್ಷ ಡಾಕೋಜಿ ಎಚ್.ಎನ್.ತಾಂಡಾ, ದುರುಗಪ್ಪ, ಸಂಯೋಜಕ ಬಾಬುಮಿಯಾ, ರಂಗಪ್ಪ, ವೀರೇಶ ಇತರರಿದ್ದರು.