ಕುಷ್ಟಗಿ: ನಟ ಡಾ.ವಿಷ್ಣುವರ್ಧನ್ ಸಮಾಧಿಯನ್ನು ಮೂಲ ಜಾಗದಲ್ಲಿಯೇ ಮರು ನಿರ್ಮಿಸುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರು ನಿರ್ದೇಶನ ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್ ಅಶೋಕ ಶಿಗ್ಗಾವಿಗೆ ಡಾ.ವಿಷ್ಣುಸೇನಾ ಸಮಿತಿ ಗುರುವಾರ ಮನವಿ ಸಲ್ಲಿಸಿತು.
ಇದನ್ನೂ ಓದಿ:ಡಾ.ವಿಷ್ಣುವರ್ಧನ್ ಸ್ಮಾರಕ ನೆಲಸಮಕ್ಕೆ ಖಂಡನೆ
ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿದ್ದ ವಿಷ್ಣುವರ್ಧನ್ ಸಮಾಧಿ ಸ್ಥಳವನ್ನು ಕೆಲವರು ತೆರವುಗೊಳಿಸಿ ಅಭಿಮಾನಿಗಳಿಗೆ ನೋವುಂಟು ಮಾಡಿದ್ದಾರೆ. ಸರ್ಕಾರ ಕನ್ನಡ ಚಿತ್ರಗಳ ಚಿತ್ರೀಕರಣಕ್ಕೆ ಅನುಕೂಲವಾಗಲೆಂದು ಲೀಸ್ ಆಧಾರದ ಮೇಲೆ ನೀಡಿರುವ ಜಮೀನನ್ನು ವೈಯಕ್ತಿಕ ಲಾಭಕ್ಕೆ ಬಳಸುತ್ತಿರುವುದು ಖಂಡನೀಯ. ಈ ವಿಚಾರದಲ್ಲಿ ಸರ್ಕಾರ ಮೌನವಾಗಿರುವುದು ವಿಷಾದಕರ ಸಂಗತಿ. ಆದ್ದರಿಂದ ಸರ್ಕಾರ ಮಧ್ಯಪ್ರವೇಶಿಸಿ ಕೋರ್ಟ್‌ಗೆ ಸೂಕ್ತ ದಾಖಲೆ ಸಲ್ಲಿಸಿ ಲೀಸ್ ಆಧಾರದ ಮೇಲೆ ನೀಡಿದ ಜಮೀನನ್ನು ವಶಕ್ಕೆ ಪಡೆದು ವಿಷ್ಣು ಸಮಾಧಿ ಮರುನಿರ್ಮಿಸಲು ಅವಕಾಶ ನೀಡಬೇಕು. ಈ ಕುರಿತು ಸರ್ಕಾರಕ್ಕೆ ನಿರ್ದೇಶನ ನೀಡಿ ವಿಷ್ಣು ಅಭಿಮಾನಿಗಳಿಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದರು.
ಪದಾಧಿಕಾರಿಗಳಾದ ವೀರೇಶ ಬಂಗಾರಶೆಟ್ಟರ್, ಬಸವರಾಜ ಪಾಟೀಲ್, ಚಿನ್ನಪ್ಪ ನಾಗರಾಳ, ಶಿವರುದ್ರಯ್ಯ ನವಲಿ ಹಿರೇಮಠ, ಬಸವರಾಜ ಗಾಣಿಗೇರ, ಶಿವರಾಜ ಮಸ್ಕಿ, ರಿಯಾಜ ಪಾಟೀಲ್, ಬಸವರಾಜ ಹಡಪದ್, ರಾಮಣ್ಣ ಕೋರಿ, ರಾಮಣ್ಣ ನೆರೆಬೆಂಚಿ, ಕಳಕಪ್ಪ ಕೊಳ್ಳಿ, ಲಿಂಗರಾಜ, ಪ್ರಭಂಜನ ಅಗ್ನಿಹೋತ್ರಿ, ಶಂಕ್ರಪ್ಪ ನಾಯಕವಾಡಿ, ಎಸ್.ಎಸ್.ಹಿರೇಮಠ, ಶಾಂತರಾಜ ಗೋಗಿ ಇತರರಿದ್ದರು.