ಕನಕಗಿರಿ: ವಿದ್ಯಾರ್ಥಿಗಳಿಗೆ ಸೈಕಲ್‌ಗಳ ವಿತರಣೆಯಿಂದ ಶೈಕ್ಷಣಿಕ ಚಟುವಟಿಕೆ ಮತ್ತು ಪ್ರಗತಿಗೆ ಸಹಕಾರಿ ಎಂದು ಹುಲಿಹೈದರ ಗ್ರಾಪಂ ಪಿಡಿಒ ಅಮರೇಶ ರಾಥೋಡ್ ಹೇಳಿದರು.
ಕನಕಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯ ಎಂಟನೇ ತರಗತಿಗೆ ವಿದ್ಯಾರ್ಥಿಗಳಿಗೆ ರಾಶಿ ಸೀಡ್ಸ್ ಕಂಪನಿ ನೀಡಿದ 31 ಸೈಕಲ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ಜಗದೀಶಪ್ಪ ಗದ್ದಿ ಮಾತನಾಡಿ, ಸೈಕಲ್‌ಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಂಪನಿಯ ಎಂಡಿ ಮೋಹನ್‌ರಾವ್, ಉತ್ಪಾದನಾ ವ್ಯವಸ್ಥಾಪಕ ನಾರಾಯಣ ಕುಷ್ಟಗಿ, ಸಿಬ್ಬಂದಿ ಸಿದ್ದಾರ್ಥ, ಸಿಆರ್‌ಪಿ ಶಿವಪ್ಪ ಹೆಳವರ್, ಶಿಕ್ಷಕರಾದ ಯಶೋಧಾ, ಪದ್ಮಾ, ಮಹಾಂತೇಶ, ಪ್ರಮುಖರಾದ ಯಮನಪ್ಪ, ಮರಿಯಪ್ಪ ಹುಗ್ಗಿ ಇತರರಿದ್ದರು.