ಕಂಪ್ಲಿ: ಮಕ್ಕಳಿಗೆ ಜಂಕ್‌ಫುಡ್ ಬದಲಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ಎಮ್ಮಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಹಮ್ಮದ್ ಫಾರೂಕ್ ಹೇಳಿದರು.
ಎಮ್ಮಿಗನೂರು ಗ್ರಾಮದ ಸಹಿಪ್ರಾ ಶಾಲೆ ಆವರಣದಲ್ಲಿರುವ ಕೂಸಿನ ಮನೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಯಕ್ಕೆ ಸರಿಯಾಗಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಬೇಕು. ಪಾಲಕರು ಮಕ್ಕಳ ಬೆಳವಣಿಗೆ ಬಗ್ಗೆ ಗಮನ ವಹಿಸಬೇಕು ಎಂದರು.
ಪಿಡಿಒ ತಾರು ಲಕ್ಷ್ಮಣನಾಯ್ಕ ಮಾತನಾಡಿ, ಕೂಸಿನ ಮನೆಯ ಸಮರ್ಪಕ ನಿರ್ವಹಣೆಗೆ ಆರೈಕೆದಾರರು ನಿಗಾ ವಹಿಸಬೇಕು. ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಗ್ರಾಪಂ ಅಧ್ಯಕ್ಷೆ ಎಚ್.ಜೆ.ಶಾರದಾ, ಸದಸ್ಯ ಹೂಗಾರ್ ಲೋಕೇಶ, ಶಿಕ್ಷಕರಾದ ಶಿವನೇಗೌಡರ ರಾಮಪ್ಪ, ಪಂಪಾಪತಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ.ಬಸನಗೌಡ, ಕೃಷ್ಣಮೂರ್ತಿ, ಪೂಜಾ, ಆರೈಕೆದಾರರಾದ ಎಚ್.ರೇಣುಕಾ, ಲಕ್ಷ್ಮೀ, ಧನಲಕ್ಷ್ಮೀ, ಶಾಂತಾ ಇತರರಿದ್ದರು.