ಚಿಮ್ಮಡ ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ಇಂಟರನ್ಯಾಷನಲ್ ಸ್ಕೂಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿದರು. ಲಲಿತಾ ರೆಡ್ಡಿ, ಬಾಬಾಗೌಡ ಪಾಟೀಲ, ಬಾಲಚಂದ್ರ ನಂದೆಪ್ಪಗೋಳ, ವಿದ್ಯಾಧರ ಸವದಿ, ಮೇನಕಾ ಸಿದ್ದು ಸವದಿ, ಸಾವಿತ್ರಿ ಬಾಬಾಗೌಡ ಪಾಟೀಲ, ದಾಕ್ಷಾಯಿಣಿ ಮಂಡಿ, ಪದ್ಮರಾಜ ಸನ್ನಕ್ಕಿ ಇದ್ದಾರೆ. 
ಜಿಲ್ಲೆ

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ

ದತ್ತಾತ್ರೇಯ ಪಿ ಕುಲಕರ್ಣಿ

ಚಿಮ್ಮಡ: ಮಕ್ಕಳಿಗಾಗಿ ಆಸ್ತಿ ಮಾಡಿಡದೆ, ಉತ್ತಮ ಸಂಸ್ಕಾರ ನೀಡುವ ಮೂಲಕ ಅವರನ್ನೇ ಆಸ್ತಿಯಾಗಿ ರೂಪಿಸಿ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.

ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ಇಂಟರನ್ಯಾಷನಲ್ ಸ್ಕೂಲ್ ಆವರಣದಲ್ಲಿ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಮೆಟ್ರೋ ಸಿಟಿಗಳಲ್ಲಿ ದೊರೆಯುವಂತ ಗುಣಮಟ್ಟದ ಶಿಕ್ಷಣ ಕಡಿಮೆ ಶುಲ್ಕದಲ್ಲಿ ಗ್ರಾಮೀಣ ಮಕ್ಕಳಿಗೆ ದೊರೆಯಲಿ ಎಂಬ ಸದುದ್ದೇಶದಿಂದ ಸ್ಥಾಪಿಸಿರುವ ಸಂಸ್ಥೆಗೆ ಶೀಘ್ರದಲ್ಲಿ ಫಲ ದೊರೆಯಲಿದೆ. ಪಾಲಕರು ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಲಿ ಎಂದು ಬಯಸು ಜತೆಗೆ ಸಂಸ್ಕಾರವಂತರಾಗಲಿ ಎಂದು ಬಯಸಬೇಕು ಎಂದರು.

ಶಾಸಕ ಸಿದ್ದು ಸವದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಲಕರು ಮಕ್ಕಳ ಭವಿಷ್ಯದ ಕುರಿತು ರಾಜಿ ಮಾಡಿಕೊಳ್ಳದೆ ಶಿಕ್ಷಣ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಪಾಲಕರ ನಿರೀಕ್ಷೆಗೆ ತಕ್ಕ ಮೌಲ್ಯಯುತ ಶಿಕ್ಷಣವನ್ನು ನಮ್ಮ ಶಿಕ್ಷಣ ಸಂಸ್ಥೆ ನೀಡಲಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಎಸ್.ಎಸ್. ಹೂಲಿ ಉದ್ಘಾಟಿಸಿದರು. ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹಾಗೂ ಓಂಕಾರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಹಿಪೋಕ್ಯಾಂಪಸ್ ಉಪಾಧ್ಯಕ್ಷೆ ಲಲಿತಾ ರೆಡ್ಡಿ ಮಾತನಾಡಿದರು.

ಜಿ.ಪಂ. ಮಾಜಿ ಸದಸ್ಯ ಬಾಬಾಗೌಡ ಪಾಟೀಲ, ಪ್ರಥಮ ದರ್ಜೆ ಗುತ್ತಿಗೆದಾರ ಬಾಲಚಂದ್ರ ನಂದೆಪ್ಪಗೋಳ, ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ವಿದ್ಯಾಧರ ಸವದಿ, ಉಪಾಧ್ಯಕ್ಷೆ ಮೇನಕಾ ಸಿದ್ದು ಸವದಿ, ಜಿಪಂ ಮಾಜಿ ಸದಸ್ಯೆ ಸಾವಿತ್ರಿ ಬಾಬಾಗೌಡ ಪಾಟೀಲ, ಸಿಆರ್‌ಪಿ ದಾಕ್ಷಾಯಿಣಿ ಮಂಡಿ, ಪ್ರಾಂಶುಪಾಲ ಪದ್ಮರಾಜ ಸನ್ನಕ್ಕಿ ಮತ್ತಿತರರಿದ್ದರು.