ಮದ್ದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ಅವರನ್ನು ಅಭಿನಂಧಿಸಲಾಯಿತು. ಇಂತಿಯಾಜ್ ಉಲ್ಲಾ ಖಾನ್, ಮೌಲಾನಾ ಅಬ್ದುಲ್ ಕರೀಂ, ಪೈರೋಜ್‌ಖಾನ್, ಆದಿಲ್ ಆಲಿ ಖಾನ್ ಇದ್ದರು. 
ಜಿಲ್ಲೆ

ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ

ಲೋಕೇಶ್ ಮನು. ಡಿ

ಮದ್ದೂರು: ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸಬೇಕೆಂದು ಪುರಸಭೆ ಅಧ್ಯಕ್ಷೆ ಕೋಕಿಲಾ ಅರುಣ್ ತಿಳಿಸಿದರು.

ಪಟ್ಟಣದ ಲೀಲಾವತಿ ಬಡಾವಣೆಯಲ್ಲಿರುವ ಜಾಮಿಯ ಫಾರೂಖಿಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ಉನ್ನತ ವಿದ್ಯಾಭ್ಯಾಸ ಪಡೆದವರಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯೆ ಯಾರೂ ಕದಿಯಲಾಗದ ಆಸ್ತಿಯಾದ್ದರಿಂದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು. ಪ್ರಸ್ತುತ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮತ್ತು ಗಂಡು ಇಬ್ಬರು ಉನ್ನತ ವಿದ್ಯಾಭ್ಯಾಸ ಮುಗಿಸಿ ಸಮಾಜದಲ್ಲಿ ಅತ್ಯುನ್ನತ ಶ್ರೇಣಿಯ ಕೆಲಸದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಪ್ರಶಂಸನೀಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ಮಾತನಾಡಿ, ಪ್ರತಿಯೊಂದು ಮಗುವಿಗೂ ಗುಣಾತ್ಮಕ ಶಿಕ್ಷಕ ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಭಿನಂದನೆ: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಫೀಜ್ ನೌಮಾನ್‌ಖಾನ್, ಹಫೀಜ್ ಅಬ್ದುಲ್ ಸಾಹಿತ್, ಡಾ.ತಾಬೀರ್ ಅಹಮದ್, ವಕೀಲ ಸಾದಿಯ ನೂಜತ್, ಡಾ.ತಾಕೀ ಉಲ್ಲಾ ಖಾನ್, ಡಾ.ಬಿ.ಬಿ.ಆಯುಷಾ ಸಿದ್ದಿಕಾ ಎಂ.ಎಂ., ಡಾ.ಸಾಭಾ ಕೌಸರ್, ಡಾ.ಅಕ್ವಿಬ್ ಸೌಧ್, ಡಾ.ಅಫೀಪ ತಾಜೀಮ್, ಡಾ.ಅಫೀಪಾ ಖಾನಂ, ಡಾ.ಅಲೀಮಾ ಸಾಧಿಯಾ, ಡಾ.ಸಾರಾ ಆಲಿ, ವಕೀಲ ಯಾಸೀನ್ ಆರ್ಫಥ್, ಪುರಸಭಾ ಅಧ್ಯಕ್ಷೆ ಕೋಕಿಲಾ ಅರುಣ, ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರಬಿ.ಗೌಡ ಅವರನ್ನು ಅಭಿನಂದಿಸಲಾಯಿತು.

ಟ್ರಸ್ಟ್‌ನ ಗೌರವಾಧ್ಯಕ್ಷ ಇಂತಿಯಾಜ್ ಉಲ್ಲಾ ಖಾನ್, ಅಧ್ಯಕ್ಷ ಮೌಲಾನಾ ಅಬ್ದುಲ್ ಕರೀಂ, ಉಪಾಧ್ಯಕ್ಷ ಅಯೂಬ್ ಖಾನ್, ಕಾರ್ಯದರ್ಶಿಗಳಾದ ಮುಹಮ್ಮದ್ ರಿಯಾಜ್, ಮುಹಮ್ಮದ್ ನಾಸೀರ್, ಸನಾ ಉಲ್ಲಾ, ನಯೀಂ ಬೇಗ್, ಸಯ್ಯದ್ ಅಹಮದ್ ಷಾ, ಎಸ್.ಕಲೀಂ ಪಾಷ. ಜಾಮಿಯ ಮಸೀದಿ ಕಮಿಟಿ ಅಧ್ಯಕ್ಷ ಅದಿಲ್ ಅಲಿ ಖಾನ್, ಕಾರ್ಯದರ್ಶಿ ಘನಿ ಉರ್ ರೆಹಮಾನ್ ಹಾಗೂ ಫೈರೋಜ್ ಖಾನ್ ಸೇರಿದಂತೆ ಇತರರು ಇದ್ದರು.