ರಾಯಚೂರಿ ಡಿಸಿ ಕಚೇರಿಯ ಗ್ರೇಡ್-2 ತಹಸೀಲ್ದಾರ್ ಪರಶುರಾಮಗೆ ಜಿಲ್ಲಾ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಒಕ್ಕೂಟ ಮನವಿ ಸಲ್ಲಿಸಿತು. ಕಲಾವಿದರಾದ ವಿಎನ್ ಅಕ್ಕಿ, ರಂಗಸ್ವಾಮಿ, ಲಕ್ಷ್ಮಣ ಮಂಡಲಗೇರಾ, ಅಣವೀರಯ್ಯ, ವೇಣುಗೋಪಾಲ, ನರಸಿಂಹ, ರಾಘವೇಂದ್ರ, ವೆಂಟಕ ನರಸಿಂಹ, ವಿಜಯಲಕ್ಷ್ಮೀ, ದೇವಣ್ಣ, ಜೋಸೆಫ್, ನರೇಂದ್ರ ಕುಮಾರ, ಲಕ್ಷ್ಮೀ ಇತರರಿದ್ದರು. 
ಜಿಲ್ಲೆ

ಕಲಾವಿದರಿಗೆ ಸಮರ್ಪಕವಾಗಿ ಧನ ಸಹಾಯ ನೀಡಿ

Kopala - Desk - Eraveni

ರಾಯಚೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಕಲಾವಿದರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಧನ ಸಹಾಯ ನೀಡಲು ಒತ್ತಾಯಿಸಿ ಜಿಲ್ಲಾ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಒಕ್ಕೂಟ ಗ್ರೇಡ್-2 ತಹಸೀಲ್ದಾರ್ ಪರಶುರಾಮಗೆ ಸೋಮವಾರ ಮನವಿ ಸಲ್ಲಿಸಿತು.

ಡಿಸೇಲ್, ಪೆಟ್ರೋಲ್, ಗ್ಯಾಸ್ ದರಗಳ ಏರಿಕೆಗಳಿಂದಾಗಿ ದಿನದ ದುಡಿಮೆಯಲ್ಲಿ ಬದುಕುತ್ತಿರುವ ಶ್ರಮಿಕ ವರ್ಗ, ಸಣ್ಣ ಸಣ್ಣ ರೈತರು, ಕೂಲಿಕಾರ್ಮಿಕರು ಮತ್ತು ಕಲಾವಿದರ ಬದುಕು ಕಷ್ಟಕರವಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿ ವರ್ಷ ಆನ್‌ಲೈನ್‌ನಲ್ಲಿ ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿ ಧನಸಹಾಯ ನೀಡುತ್ತಿತ್ತು. ಇದು ಕಲಾವಿದರ ಬದುಕಿಗೆ ಕಾರ್ಯ ಚಟುವಟಿಕೆ ನಿರಂತರವಾಗಿ ಉತ್ತೇಜನ ನೀಡುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಧನಸಹಾಯ ಕೆಲವರಿಗೆ ಮಾತ್ರ ನೀಡಲಾಗುತ್ತಿದೆ. ಇದು ಕಲಾವಿದರಿಗೆ ಚಿಂತೆಗೀಡು ಮಾಡಿದೆ. ಅರ್ಜಿ ಆಹ್ವಾನಿಸಿ ಕ್ರಮ ವಹಿಸುವಂತೆ ಒತ್ತಾಯಿಸಿದರು.