ಜಿಲ್ಲೆ

ರೈತ ಚಳವಳಿಗೆ ಹೊಸ ರೂಪ ಕಲ್ಪಿಸಿ

Dharwad

ನವಲಗುಂದ: ನರಗುಂದ, ನವಲಗುಂದ ಬಂಡಾಯವು ರೈತ ಸಂಘಟನೆಗೆ ಸಾಕ್ಷಿಯಾಗಿತ್ತು. ಕಳೆದ 42 ವರ್ಷಗಳಿಂದ ರೈತ ಚಳುವಳಿಗಳು ರಾಜಕೀಯ ಲಾಭಕ್ಕಾಗಿ ತನ್ನ ಅಸ್ಥಿತ್ವವನ್ನು ಕಳೆದುಕೊಂಡು ರೈತರ ಹಿತ ಕಾಯುವಲ್ಲಿ ವಿಫಲವಾಗಿದ್ದು, ಯುವಕರು ಜಾಗೃತರಾಗಿ ರೈತ ಚಳವಳಿಗೆ ಹೊಸರೂಪ ಕಲ್ಪಿಸುವ ಅವಶ್ಯಕತೆ ಇದೆ ಎಂದು ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಹೇಳಿದರು.
42ನೇ ರೈತ ಹುತಾತ್ಮ ದಿನಚರಣೆ ನಿಮಿತ್ತ ಇಲ್ಲಿನ ರೈತ ಭವನದ ಹತ್ತಿರದಲ್ಲಿ ಹಲವು ರೈತ ಸಂಘಟನೆಗಳು ಆಯೋಜಿಸಿದ್ದ ‘ಮಹಾದಾಯಿಗಾಗಿ ಮಹಾವೇದಿಕೆ’ ಕಾರ್ಯಕ್ರಮದಲ್ಲಿ ಆವರು ಮಾತನಾಡಿದರು.
ಈ ಹಿಂದೆ ದೇಶದಲ್ಲಿ ಶೇ. 125ರಷ್ಟಿದ್ದ ಕೃಷಿ, ಈಗ ಶೇ. 52ಕ್ಕೆ ಬಂದು ತಲುಪಿದೆ. ಆಳುವ ಸರ್ಕಾರಗಳು ಇಬ್ಬಗೆಯ ಕೃಷಿ ನೀತಿಯಿಂದಾಗಿ ಗೊಬ್ಬರದ ಬೆಲೆ ಆಕಾಶದೆತ್ತರಕ್ಕೆ ತಲá-ಪಿದೆ. ಕಳಪೆ ಬೀಜಗಳ ಹಾವಳಿಯಿಂದಾಗಿ ರೈತ ಸಮುದಾಯ ಬಳಲುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿ, ರೈತರ ಹೆಸರಿನಲ್ಲಿ ಹಲವಾರು ಸಂಘಟನೆಗಳು ಹುಟ್ಟಿ ವೈಯಕ್ತಿಕ ದುರಾಸೆಯಿಂದಾಗಿ ಮೂಲೆ ಗುಂಪಾಗಿವೆ. ಆದರೆ, ಈಗ ಎಲ್ಲ ಸಂಘಟನೆಗಳು ಒಗ್ಗಟ್ಟಾಗದಿದ್ದರೂ ಪ್ರಾಮಾಣಿಕ ಸಂಘಟನೆಗಳ ಒಂದೆಡೆ ಸೇರಿ ಹೋರಾಟ ಮಾಡುವ ಅನಿವಾರ್ಯತೆ ಇದೆ. ಮೋದಿ ಸರ್ಕಾರ ಕೇವಲ ಬಂಡವಾಳ ಶಾಹಿಗಳು ಹಾಗೂ ಕಾಪೋರೇಟ್ ಸಂಸ್ಥೆಗಳಿಗೆ ಅನುಕೂಲವಾಗá-ವಂತಹ ಕಾಯ್ದೆಗಳನ್ನು ಜಾರಿ ಮಾಡಿ ರೈತರ ಹಿತ ಕಾಯುವಲ್ಲಿ ವಿಫಲವಾಗಿದೆ ಎಂದರು.
ದೆಹಲಿಯಲ್ಲಿ ನಡೆದ ಹೋರಾಟದ ಮಾದರಿ ನಮ್ಮಲ್ಲೂ ನಡೆದಾಗ ಮಾತ್ರ ಸರ್ಕಾರವನ್ನು ಕಣ್ತೆರೆಸಲು ಸಾಧ್ಯ. ಮಹಾದಾಯಿ ಹೋರಾಟದಿಂದಲೇ ಅಧಿಕಾರದ ಗದ್ದುಗೆ ಹಿಡಿದ ಬಸವರಾಜ ಬೊಮ್ಮಾಯಿ ಅವರು ಯೋಜನೆ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರೈತ ಮುಖಂಡ ಸೂಧನ ತಿವಾರಿ ಅಧ್ಯಕ್ಷತೆ ವಹಿಸಿದ್ದರು. ನಾನಾ ಸಂಘಟನೆಗಳ ಮುಖಂಡರಾದ ಸಿದ್ದನಗೌಡ ಪಾಟೀಲ, ಶಂಕರ ಅಂಬಲಿ, ಲೋಕನಾಥ ಹೆಬಸೂರ, ಸಿದ್ದನಗೌಡ ಮೊದಗಿ, ಸುಭಾಷ ಶಿರಬೂರ, ಸೂರ ಶ್ರೀಧರ್, ಶಂಕರಗೌಡ ಪಾಟೀಲ, ರಾಮಕ್ಕ ಕೆಂಚೇನಳ್ಳಿ, ಸಿ.ಎಸ್. ಪಾಟೀಲ, ಜಿ.ಬಿ. ಪಾಟೀಲ ಇದ್ದರು.