ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಪಟ್ಟಣದ ಕರ್ನಾಟಕ ಪಬ್ಲಿಕ್​ ಶಾಲೆಯಲ್ಲಿ ಆಯೋಜಿಸಿದ್ದ ಹೋಬಳಿ ಹಂತದ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಗ್ರಾಪಂ ಅಧ್ಯೆ ಉಮಾ ಹರೀಶ್​, ಎಸ್​ಡಿಎಂಸಿ ಅಧ್ಯಕ್ಷ ಸೋಮಶೇಖರ್​ ಉದ್ಘಾಟಿಸಿದರು. ಗ್ರಾಪಂ ಸದಸ್ಯರಾದ ಮಹಿಮಣ್ಣ, ಟಿ.ಎನ್​.ನಾಗೇಂದ್ರ, ಕೆಪಿಎಸ್​ ಕಾಲೇಜು ವಿಭಾಗದ ಪ್ರಾಂಶುಪಾಲೆ ಜಯಶ್ರೀ, ಪ್ರೌಢಶಾಲೆ ವಿಭಾಗದ ಉಪಪ್ರಾಂಶುಪಾಲೆ ಪದ್ಮಾವತಿ ಇದ್ದರು. 
ಜಿಲ್ಲೆ

ಪಕ್ಷಪಾತ ಮಾಡದೆ ಲಿತಾಂಶ ನೀಡಿ

ತ್ಯಾಮಗೊಂಡ್ಲು: ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸಿರುವುದರಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ತ್ಯಾಮಗೊಂಡ್ಲು ಗ್ರಾಪಂ ಅಧ್ಯೆ ಉಮಾ ಹರೀಶ್​ ಹೇಳಿದರು. ಪಟ್ಟಣದ ಕರ್ನಾಟಕ ಪಬ್ಲಿಕ್​ ಶಾಲೆ ಆಟದ ಮೈದಾನದಲ್ಲಿ ಮಂಗಳವಾರ ಗ್ರಾಮಾಂತರ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ಹೋಬಳಿ ಹಂತದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ರೀಡೆಯಿಂದ ಏಕತಾನತೆ ಕಡಿಮೆಯಾಗಿ ಜೀವನದಲ್ಲಿ ಉತ್ಸಾಹ ತುಂಬುತ್ತದೆ. ಜತೆಗೆ ವಿದ್ಯಾಭ್ಯಾದಲ್ಲಿ ಆಸಕ್ತಿ ಹೆಚ್ಚುತ್ತದೆ. ಆಟದಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವುದು ಮುಖ್ಯ. ತೀರ್ಪುಗಾರರು ಪಕ್ಷಪಾತ ಮಾಡದೆ ಲಿತಾಂಶ ನೀಡಬೇಕು ಎಂದ ಹೇಳಿದರು. ಸೋಲೇ ಗೆಲುವಿಗೆ ಮೆಟ್ಟಿಲು. ವಿದ್ಯಾರ್ಥಿಗಳು ಕ್ರೀಡಾಸ್ಪೂರ್ತಿ ಹಾಗೂ ಗೆಲ್ಲಲೇಬೇಕು ಎಂಬ ಮನೋಭಾವದಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಹೋಬಳಿ ಅಷ್ಟೇ ಅಲ್ಲದೇ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿಬೇಕು ಎಂದು ಎಸ್​ಡಿಎಂಸಿ ಅಧ್ಯಕ್ಷ ಸೋಮಶೇಖರ್​ ಸಲಹೆ ನೀಡಿದರು. ದೊಡ್ಡಬೆಲೆ, ಮಣ್ಣೆ, ಭೈರನಾಯಕನಹಳ್ಳಿ, ಕುಲವನಹಳ್ಳಿ, ಹಸಿರುವಳ್ಳಿ, ಚಿಕ್ಕನಹಳ್ಳಿ, ಇಸುವನಹಳ್ಳಿ, ಅರೆಬೊಮ್ಮನಹಳ್ಳಿ ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ಕೆಪಿಎಸ್​ ತ್ಯಾಮಗೊಂಡ್ಲು, ಜ್ಞಾನಧಾಮ, ನಿಸರ್ಗ ವಿದ್ಯಾನಿಕೇತನ, ಅಕ್ಷರ, ಸಿ.ವಿ.ರಾಮನ್​ ಪಬ್ಲಿಕ್​ ಶಾಲೆ, ವೀಣಾ ಮಕ್ಕಳ ಮಂದಿರ, ಟಿಕೆಕೆಎಂಎಚ್​ಎಸ್​, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಅಂಬೇಡ್ಕರ್​ ವಸತಿ ಶಾಲೆ, ಕುಲವನಹಳ್ಳಿ ಎಸ್​ಜೆಆರ್​ಎಚ್​ಎಸ್​, ಅರೆಬೊಮ್ಮನಹಳ್ಳಿ ಎಸ್​ಎಲ್​ಎನ್​, ಪ್ರೌಢಶಾಲೆಯ 1500 ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.

ಪ್ರೌಢಶಾಲಾ ಶಿಕ್ಷಕರ ಸಂದ ವಿ.ರವಿಕುಮಾರ್​, ಲೋಕೇಶ್​, ಗೋಪಿನಾಥ್​, ಸಿಆರ್​ಪಿ ಸುಕನ್ಯಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಅಧ್ಯಕ್ಷ ಗಿರೀಶ್​, ಸರ್ಕಾರಿ ನೌಕರರ ಸಂದ ಅಧ್ಯಕ್ಷ ನಾಗೇಶ್​, ನೀಲಮ್ಮ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಜಗದೀಶ್​, ಮುಖಂಡರಾದ ಷಫಿ, ದೈಹಿಕ ಶಿಕ್ಷಕರಾದ ಯರ್ರಪ್ಪ, ಮಂಜುನಾಥ್​, ಉಷಾ, ಮಂಜುಳಾ, ಶ್ರೀನಿವಾಸ್​, ಸೋಮಪ್ಪ ಅಭಿಷೇಕ್​, ಅಬ್ದುಲ್​ ಇದ್ದರು.