ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ 25 ಸರ್ಕಾರಿ ಪ್ರೌಢಶಾಲೆಗಳಿದ್ದು, 12 ಅನುದಾನಿತ ಮತ್ತು 16 ಅನುದಾನ ರಹಿತ ಪ್ರೌಢಶಾಲೆಗಳು ಸೇರಿ ಒಟ್ಟು 53 ಶಾಲೆಗಳಿವೆ. ಅವುಗಳಲ್ಲಿ 1419 ಬಾಲಕರು ಹಾಗೂ 1574 ಬಾಲಕಿಯರು ಒಟ್ಟು 2993 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದರು.
969ಬಾಲಕರು, 1289 ಬಾಲಕಿಯರು ಸೇರಿ 2258 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಪ್ರಸಿದ್ಧಿ ಆಂಗ್ಲಮಾಧ್ಯಮ ಶಾಲೆಯ ಮೇಘನಾ 620 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನದಲ್ಲಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಮೋರಗೆರೆಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಬಸವರಾಜ ಛಲುವಾದಿ 616 ಅಂಕಗಳನ್ನು ಪಡೆದು ತಾಲೂಕಿಗೆ ದ್ವಿತೀಯ ಸ್ಥಾನದಲ್ಲಿದ್ದಾನೆ.
ಮೋರಗೆರೆಯ ಸರ್ಕಾರಿ ಪ್ರೌಢಶಾಲೆಯ ಛಲುವಾದಿ ಬಸವರಾಜ ಶೇ.98.5, ಹಂಪಾಪಟ್ಟಣದ ಶ್ರೀಚಂದ್ರಮೌಳೇಶ್ವರ ಪ್ರೌಢಶಾಲೆಯ ಉಪ್ಪಾರ ಮಂಜುನಾಥ ಶೇ.97.9, ಅಂಕಸಮುದ್ರದ ಸರ್ಕಾರಿ ಪ್ರೌಢಶಾಲೆಯ ನಯನ ತಿಗರಿ ಶೇ.97.2 ಅಂಕಗಳನ್ನು ಪಡೆದು ತಾಲೂಕಿಗೆ ಟಾಪರ್ ಆಗಿದ್ದಾರೆ.