ಜಿಲ್ಲೆ

ಮದುವೆ ವಿಚಾರ ಮಾತನಾಡಲು ಯುವತಿಯನ್ನು ಕರೆಸಿಕೊಂಡ ಪ್ರಿಯಕರನಿಂದ ಘೋರ ಕೃತ್ಯ

ಬೆಂಗಳೂರು: ಪ್ರೀತಿಯ ವಿಚಾರಕ್ಕೆ ಯುವತಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗಿರಿನಗರದ ದ್ವಾರಕಾ ನಗರದಲ್ಲಿ ನಿನ್ನೆ (ಸೋಮವಾರ) ರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ.

ನರ್ಮದಾ (18) ಕೊಲೆಯಾದ ಯುವತಿ. ತನ್ನ ಪ್ರಿಯಕರ ಅಭಿ ಎಂಬಾತನಿಂದಲೇ ನರ್ಮದಾ ಹತ್ಯೆಯಾಗಿದ್ದಾಳೆ. ಮದುವೆ ವಿಚಾರ ಮಾತನಾಡಬೇಕೆಂದು ಕರೆಸಿಕೊಂಡು ಅಭಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆದರೆ, ಕೊಲೆಗೆ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ. ತನಿಖಾ ನಂತರವಷ್ಟೇ ಕೊಲೆ ಹಿಂದಿನ ಅಸಲಿಯತ್ತು ತಿಳಿಯಲಿದೆ.

ಆರೋಪಿ ಅಭಿ ರಾಜಾಜಿನಗರ ಠಾಣೆಯ ರೌಡಿಶೀಟರ್. ಸದ್ಯ ಗಿರಿನಗರ ಪೊಲೀಸರು ಅಭಿಯನ್ನು ಬಂಧಿಸಿದ್ದಾರೆ. ಯುವತಿ ನರ್ಮದಾ ಬಿಕಾಂ ವಿದ್ಯಾರ್ಥಿನಿಯಾಗಿದ್ದಳು. ಈ ಸಂಬಂಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)