ಕುಂದಾಪುರ: ಉಪ್ಪಿನಕುದ್ರು ಶಿಲ್ಪಾ ದೇವಾಡಿಗ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಕೃತ್ಯಕ್ಕೆ ಪ್ರಚೋದನೆ ನೀಡಿದ ಆರೋಪಿಗಳ ಪೈಕಿ ಅಜೀಜ್ ಎಂಬಾತನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಶಿಲ್ಪಾ ಅಜೀಜ್ ಎಂಬಾತನ ಜವಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಅಜೀಜ್ ಕೆಲಸದ ವೇಳೆ ಪುಸಲಾಯಿಸಿ ಶಿಲ್ಪಾ ಸ್ನೇಹ ಬೆಳೆಸಿಕೊಂಡಿದ್ದ. ಅಜೀಜ್ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ವೀಡಿಯೊ ಮಾಡಿಕೊಂಡಿದ್ದ. ಬಳಿಕ ಮತಾಂತರಗೊಂಡು ಮದುವೆ ಮಾಡುಕೊಳ್ಳುವಂತೆ ಶಿಲ್ಪಾಗೆ ಒತ್ತಾಯ ಮಾಡಿದ್ದು, ಇದರ ಬೆನ್ನಲ್ಲೇ ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಶಿಲ್ಪಾ ಸಾವನ್ನಪ್ಪಿದ್ದಳು. ಅಜೀಜ್ ಮತ್ತು ಆತನ ಪತ್ನಿ ಸಲ್ಮಾ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿತ್ತು