ಜಿಲ್ಲೆ

ಆತ್ಮಹತ್ಯೆಗೆ ಶರಣಾದ ಯುವತಿಯ ಡೆತ್​ನೋಟ್​ನಲ್ಲಿತ್ತು ಪ್ರಿಯಕರನ ಹೆಸರು

ಬೆಂಗಳೂರು: ಡೆತ್​ನೋಟ್​ ಬರೆದಿಟ್ಟು ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ.

ಪವಿತ್ರ (27) ಆತ್ಮಹತ್ಯೆಗೆ ಶರಣಾದ ಯುವತಿ. ಡೆತ್​ನೋಟ್​ನಲ್ಲಿ ನನ್ನ ಸಾವಿಗೆ ಪ್ರಿಯಕರ ನಾಗೇಶ್ ಕಾರಣ ಎಂದು ಪವಿತ್ರ ಉಲ್ಲೇಖಿಸಿದ್ದಾಳೆ. ಅಂಗನವಾಡಿ ಟೀಚರ್ ಆಗಿದ್ದ ಪವಿತ್ರ, ಇಂದು ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾಳೆ.

ಆರೋಪಿ ನಾಗೇಶ್​ನನ್ನು ಮಾಗಡಿ ರೋಡ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು, ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. (ದಿಗ್ವಿಜಯ ನ್ಯೂಸ್​)