ಜಿಲ್ಲೆ

ಕನ್ಯೆ ಸಿಗಲಿಲ್ಲವೆಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ

Haveri - Kariyappa Aralikatti

ರಾಣೆಬೆನ್ನೂರ: ಮದುವೆಯಾಗಲು ಹುಡುಕಿ ಸಿಗಲಿಲ್ಲ ಎನ್ನುವ ಕಾರಣಕ್ಕೆ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕುರುಬಗೇರಿಯಲ್ಲಿ ಭಾನುವಾರ ಸಂಭವಿಸಿದೆ.
ಜಗದೀಶ ನಾಗಪ್ಪ ಬಟ್ಟಂಗಿ (28) ಮೃತ ಯುವಕ.
ಈತ ವಾಹನ ಚಾಲಕನಾಗಿದ್ದು, ಎರಡ್ಮೂರು ವರ್ಷದಿಂದ ಮದುವೆಯಾಗುವ ಸಲುವಾಗಿ ಹುಡುಗಿ ಹುಡುಕುತ್ತಿದ್ದ. ಆದರೆ, ಹುಡುಗಿ ಸಿಕ್ಕಿರಲಿಲ್ಲ. ಇದರಿಂದ ಮನನೊಂದು ನಗರದ ಹೊರವಲಯದ ಜಮೀನುವೊಂದರಲ್ಲಿ ವಿಷ ಸೇವಿಸಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.