ಹೊಸಪೇಟೆ: ಹಾವು ಕಚ್ಚಿ ಬಾಲಕಿಯೊಬ್ಬಳು ಮೃತಪಟ್ಟಿದ್ದು, ತಾಯಿ ಸ್ಥಿತಿ ಚಿಂತಾಜನಕವಾಗಿರುವ ಘಟನೆ ತಾಲೂಕಿನ ಎನ್.ಆರ್.ಕ್ಯಾಂಪ್‌ನಲ್ಲಿ ಸೋಮವಾರ ಬೆಳಗಿನಜಾವ ಸಂಭವಿಸಿದೆ.
ಪೃಥ್ವಿ(೧೦) ಸಾವನ್ನಪ್ಪಿದ್ದು, ತಾಯಿ ಶಿಲ್ಪ(ಸರಸ್ವತಿ)(೩೫) ಹಾವು ಕಡಿತಕ್ಕೆ ಒಳಗಾಗಿದ್ದಾರೆ.
ಮನೆಯಲ್ಲಿ ಮಲಗಿದ್ದಾಗ ಬೆಳಗಿನ ಜಾವ ತಾಯಿ ಮತ್ತು ಮಗುವಿಗೆ ವಿಷಪೂರಿತ ಸರ್ಪ ಕಚ್ಚಿದ್ದು, ಬೆಳಗ್ಗೆ ಐದು ಗಂಟೆ ಸುಮಾರಿಗೆ ಗಮನಕ್ಕೆ ಬಂದಿದೆ. ಬಳಿಕ ಹೊಸಪೇಟೆ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ವೇಳೆಗೆ ಬಾಲಕಿ ಮೃತಪಟ್ಟಿದ್ದಾಳೆ. ತಾಯಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.