ಜಿಲ್ಲೆ

ಚಲಿಸುವ ರೈಲಿನಿಂದ ಬಿದ್ದಿದ್ದ ಬಾಲಕಿ ಸಾವು

ವೀರೇಶ ಸೌದ್ರಿ

ಭಟ್ಕಳ: ಮುರ್ಡೇಶ್ವರ ಸಮೀಪ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಅಸ್ವಸ್ಥಗೊಂಡಿದ್ದ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾಳೆ.

ರಾಜಸ್ಥಾನದ ಗಂಗಾಪುರ ಸಿಟಿ ಮೂಲದ ಅಲ್ಜಿಯಾಬಾನು ಸುಲೇಮಾನ್ ಖಾನ್ ಮೃತ ಬಾಲಕಿ. ಈಕೆ ತನ್ನ ಪಾಲಕರೊಂದಿಗೆ ಅಮೃತಸರ್ ಕುಚುವೆಲ್ಲಿ ಸೂಪರ್ ಫಾಸ್ಟ್ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ನ. 25ರ ರಾತ್ರಿ 9 ಗಂಟೆ ಸುಮಾರಿಗೆ ಮುರ್ಡೇಶ್ವರ ಹತ್ತಿರ ಚಲಿಸುವ ರೈಲಿನಿಂದ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣ ಆಕೆಯನ್ನು ಮುರ್ಡೇಶ್ವರ ಆರ್‌ಎನ್‌ಎಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಬಳಿಕ ಅಲ್ಲಿಂದ ಮಂಗಳೂರು ವೆನ್ಲಾಕ್‌ಗೆ ದಾಖಲಿಸಲಾಗಿತ್ತು.