ಅಳವಂಡಿ: ಹೆಣ್ಣು ಮಕ್ಕಳು ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಮೆರೆದಿದ್ದಾರೆ. ಸಮಾಜದಲ್ಲಿ ಅಸಮಾನತೆಯನ್ನು ಹೋಗಲಾಡಿಸಲು ಹೆಣ್ಣು ಮಗುವಿನ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಆಗೂ ನೀ ಅನೀಕೇತನ ಸಂಸ್ಥೆಯ ಮುಖ್ಯಸ್ಥೆ ಧರಣಿ ಬಸವರಾಜ ಸಸಿ ತಿಳಿಸಿದರು.
ಇದನ್ನೂ ಓದಿ: ಅರಣ್ಯ ಭೂಮಿ ಹಕ್ಕು ಕೊಡಿ
ಸಮೀಪದ ಬಿಸರಹಳ್ಳಿಯ ಕರ್ನಾಟಕ ಆರೋಗ್ಯ ಸಂವರ್ಧನಾ ಪ್ರತಿಷ್ಠಾನ, ಆಗೂ ನೀ ಅನೀಕೇತನ ಸಂಸ್ಥೆ, ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಸೋಮವಾರ ಮಾತನಾಡಿದರು.
ಹೆಣ್ಣು ಸಮಾಜದ ಕಣ್ಣು ಇದ್ದ ಹಾಗೆ. ಹೆಣ್ಣು ಮಗುವನ್ನು ಗೌರವಿಸುವ ಜತೆಗೆ ಶಿಕ್ಷಣ, ಆರೋಗ್ಯ, ಪೋಷಣೆ, ಸಮಾನತೆಯ ಮಹತ್ವವನ್ನು ತಿಳಿಸಬೇಕು. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಿನ ಅನ್ಯಾಯ ಹಾಗೂ ದೌರ್ಜನ್ಯಗಳ ತಡೆಗೆ ಕ್ರಮವಹಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಮಾತನಾಡಿ, ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ. ಪುರುಷರಿಗೆ ಸಮಾನರಾಗಿ ಹೆಣ್ಣು ಮಕ್ಕಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಗಂಡು ಹೆಣ್ಣು ಎಂಬ ತಾರತಮ್ಯ ಬಿಟ್ಟು ಎಲ್ಲರನ್ನು ಒಂದೇ ರೀತಿ ನೋಡಿಕೊಳ್ಳಿ. ಬಾಲ ಕಾರ್ಮಿಕ ಪದ್ದತಿ, ಬಾಲ್ಯ ವಿವಾಹ ಕಂಡರೆ ನಿಲ್ಲಿಸಿ. ಕಾನೂನು ಪ್ರಕಾರ ಅಪರಾಧಗಳಿವು. ಹೆಣ್ಣು ಮಕ್ಕಳನ್ನು ಗೌರವಿಸಿ ಎಂದರು.
ಕೆಎಚ್‌ಪಿಟಿ ಸಮುದಾಯ ಸಂಘಟಕಿ ಕಲ್ಪನಾ ಹಿರೇಮಠ, ಪ್ರಮುಖರಾದ ವಿಶಾಲಾಕ್ಷಿ ಮೀನಹಳ್ಳಿ, ರಮೇಶರಡ್ಡಿ ಮೂಲಿಮನಿ, ಮಲ್ಲಯ್ಯ ಮಳ್ಳಯ್ಯನವರ, ಚಿತ್ರನಟ ಚೇತನ್, ಬಸವರಾಜ ವಾಲಿಕಾರ, ಅಜಿತ್, ಬಸವರಾಜ ಮುರ್ಲಾಪುರ, ಹನುಮಂತಪ್ಪ ಚಲವಾದಿ, ಯಮುನಾ, ಕಮಲಾಕ್ಷಿ, ಪ್ರಮಿಳಾ ಇದ್ದರು.